ಸ್ವತಂತ್ರ ಫೆಲೆಸ್ತೀನ್ ಇಲ್ಲದೆ ಇಸ್ರೇಲ್ ನೊಂದಿಗೆ ಯಾವುದೇ ಸಂಬಂಧವಿಲ್ಲ – ಸೌದಿ ಕ್ರೌನ್ ಪ್ರಿನ್ಸ್

0
66

ಸನ್ಮಾರ್ಗ ವಾರ್ತೆ

ಪಶ್ಚಿಮ ಜೆರುಸಲೇಮನ್ನು ಕೇಂದ್ರವಾಗಿಟ್ಟುಕೊಂಡು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣವಾಗುವವರೆಗೆ ಇಸ್ರೇಲ್ ನೊಂದಿಗೆ ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಏರ್ಪಡಿಸುವುದಿಲ್ಲ ಎಂದು ಸೌದಿ ಅರೇಬಿಯಾ ಖಡಕ್ಕಾಗಿ ಹೇಳಿದೆ.

ಸೌದಿ ಶೂರ ಕೌನ್ಸಿಲ್ ನ ಒಂಬತ್ತನೇ ಸಮ್ಮೇಳನದಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಆಗ್ರಹವನ್ನು ಕಡೆಗಣಿಸಿ ಫೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ಮಾಡುತ್ತಿದೆ. ಇದನ್ನು ಸೌದಿ ಪ್ರಬಲವಾಗಿ ಖಂಡಿಸುತ್ತದೆ. ಫೆಲೆಸ್ತೀನ್ ಸಮಸ್ಯೆಯು ಸೌದಿಯ ಆದ್ಯತಾ ಪಟ್ಟಿಯ ಮುಂಚೂಣಿಯಲ್ಲಿದೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.