7 ಗಂಟೆಯಲ್ಲಿ 101 ಮಹಿಳೆಯರಿಗೆ ಟ್ಯೂಬೆಕ್ಟಮಿ ಶಸ್ತ್ರಕ್ರಿಯೆ; ಇಬ್ಬರು ವೈದ್ಯರಿಗೆ ಶೋಕಾಸ್ ನೋಟಿಸ್

0
612

ಸನ್ಮಾರ್ಗ ವಾರ್ತೆ

ರಾಯ್‍ಪುರ: ಛತ್ತೀಸ್ಗಡದಲ್ಲಿ ಆಯೋಜಿಸಲಾಗಿದಗದ ಶಿಬಿರವೊಂದರಲ್ಲಿ ಮಕ್ಕಳಾಗದಂತೆ ತಡೆಯುವ ಟ್ಯೂಬೆಕ್ಟಮಿ ಶಸ್ತ್ರ‌ಕ್ರಿಯೆಯನ್ನು ಏಳು ಗಂಟೆಗಳಲ್ಲಿ 101 ಮಂದಿ ಮಹಿಳೆಯರಿಗೆ ಮಾಡಿರುವುದು ವಿವಾದಕ್ಕೀಡಾಗಿದ್ದು ಇದೀಗ ತನಿಖೆಗೆ ಆದೇಶಿಸಲಾಗಿದೆ. ಶಿಬಿರಕ್ಕೆ ಹೆಚ್ಚು ಆದಿವಾಸಿ ಮಹಿಳೆಯರನ್ನು ಚಿಕಿತ್ಸೆಗೆ ಕರೆತರಲಾಗಿತ್ತು. ಅಂಬಿಕಾಪುರ ಜಿಲ್ಲೆಯ ಮೆಯಿನ್‍ಪತ್, ಸೀತಾಪುರ ಬ್ಲಾಕ್‍ನ ಮಹಿಳೆಯರಿವರು.

ನರ್‍ಮದಾ ಪುರ ಕಮ್ಯುನಿಟಿ ಹೆಲ್ತ್ ಸೆಂಟರಿನ ಶಿಬಿರದಲ್ಲಿ ಟ್ಯೂಬೆಕ್ಟಮಿಯನ್ನು ಮಾಡಿದ ಬಳಿಕ 10-6 ನಿಮಿಷಗಳ ವಿಶ್ರಾಮ ಅವಕಾಶ ನೀಡಿ ಮನೆಗೆ ಕಳುಹಿಸಿಕೊಡಲಾಗಿದೆ. ರಾತ್ರೆ ಆಪರೇಶನ್ ಶುರುವಾಗಿದ್ದು, ಬೆಳಗ್ಗೆ ಮೂರು ಗಂಟೆಗೆ ಕೊನೆಗೊಂಡಿತ್ತು.

2014ರಲ್ಲಿ ಛತ್ತೀಸ್‍ಗಡದ ಬಿಲಾಸಪುರ ಜಿಲ್ಲೆಯ ಬಂಜೆಕರಣ ಶಿಬಿರದಲ್ಲಿ ಶಸ್ತ್ರಕ್ರಿಯೆ ಮಾಡಿಸಿಕೊಂಡ 15 ಮಹಿಳೆಯರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಶಿಬಿದಲ್ಲಿ 30 ಮಹಿಳೆಯರಿಗೆ ಪ್ರತಿ ದಿನಾಲೂ ಶಸ್ತ್ರಕ್ರಿಯೆ ನೀಡಲು ಸರಕಾರ ಆದೇಶಿಸಿತ್ತು. ಈ ಆದೇಶದ ಉಲ್ಲಂಘನೆ ಮೇಲಿನ ಘಟನೆಯಲ್ಲಿ ನಡೆದಿದೆ. ಆದುದರಿಂದ ತನಿಖೆಗೆ ಆದೇಶಿಸಲಾಗಿದೆ.

ಕುಟುಂಬ ಯೋಜನೆ ಪುರುಷರಿಗಿಂತ ಹೆಚ್ಚು ಮಹಿಳೆಯರು ಮಾಡಿಸಿಕೊಳ್ಳುತ್ತಿದ್ದಾರೆ. ಇದು ಆಶ್ಚರ್ಯದ ಸಂಗತಿ. ಇದರಲ್ಲಿ ಎಲ್ಲ ನಿರ್ದೇಶಗಳನ್ನು ಉಲ್ಲಂಘಿಸಿಲಾಗಿದೆ ಎಂದು ಆರೋಗ್ಯ ತಜ್ಞ ಡಾ. ಪರಿವೇಶ್ ಮಿಶ್ರ ಹೇಳಿದರು.

ಬ್ಲಾಕ್ ಮೆಡಿಕಲ್ ಅಧಿಕಾರಿ ಡಾ. ಜಿಬುನಸ್ ಏಕ್ತಾ, ಡಾ. ಆರ್.ಎಸ್.ಸಿಂಗ್ ಶಿಬಿರದಲ್ಲಿ ಆಪರೇಷನ್ ಮಾಡಿದ ವೈದ್ಯರು. ತುಂಬ ಮಹಿಳೆಯರು ಟ್ಯೂಬೆಕ್ಟಮಿ ಮಾಡಿಸಿಕೊಳ್ಳಲು ಶಿಬರಕ್ಕೆ ಬಂದಿದ್ದರು. ಸರ್ಜರಿ ಮಾಡದೆ ಮನೆಗೆ ಹೋಗಲು ಅವರು ಒಪ್ಪಲಿಲ್ಲ. ಘಟನೆ ತಿಳಿದು ಬಂದ ನಂತರ ಜಿಲ್ಲಾ ಆರೋಗ್ಯಾಧಿಕಾರಿ ಪಿಎಸ್ ಸಿಸೋಡಿಯ ತನಿಖೆಗಾಗಿ ಮೂರು ಮಂದಿ ವೈದ್ಯರ ಸಮಿತಿಯನ್ನು ನೇಮಿಸಿದ್ದು, ಶಿಬಿರಕ್ಕೆ ನೇತೃತ್ವ ಕೊಟ್ಟ ಇಬ್ಬರು ವೈದ್ಯರಿಗೆ ಶೋಕಾಸ್ ನೋಟಿಸು ಕೊಡಲಾಗಿದೆ.