“ಶಾಂತಿಗಾಗಿ ಒಂದು ಅವಕಾಶ ಕೊಡಿ”- ಪಾಕ್ ಪ್ರಧಾನಿ ಇಮ್ರಾನ್ ಖಾನ್

0
1278

ಇಸ್ಲಾಮಾಬಾದ್,ಫೆ. 25: ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಸ್ಪರ ಸಂಬಂಧ ಕೆಟ್ಟುಹೋಗಿದ್ದು ಇದರ ಪರಿಹಾರಕ್ಕಾಗಿ ಶಾಂತಿ ಮಾತುಕತೆಗೆ ಅವಕಾಶ ನೀಡಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು. ದೇಶ ಚುನಾವಣೆಯತ್ತ ಸಾಗುವಾಗ ಶಾಂತಿಯ ವಾತಾವರಣ ನೆಲೆಗೊಳಿಸುವುದು ಪ್ರಧಾನಿ ನರೇಂದ್ರ ಮೋದಿ ಮರೆತ್ತಿದ್ದಾರೆ.

ಶಾಂತಿಗಾಗಿ ಒಂದು ಅವಕಾಶ ನೀಡಬೇಕೆಂದು ಇಮ್ರಾನ್ ಖಾನ್ ಪ್ರಧಾನಿ ಮೋದಿಯೊಂದಿಗೆ ವಿನಂತಿ ಮಾಡಿದ್ದಾರೆ. ಪುಲ್ವಾಮ ಭಯೋತ್ಪಾದನೆಗೆ ಸಂಬಂಧಿಸಿ ಭಾರತದ ಗುಪ್ತಚರ ತನಿಖೆಯ ವಿವರ ಮತ್ತು ಸಾಕ್ಷ್ಯಗಳನ್ನು ಒದಗಿಸಿದರೆ ಸೂಕ್ತಕ್ರಮಗಳನ್ನು ಕೈಗೊಳ್ಳಲು ತಯಾರಿದ್ದೇವೆ. ಪಠಾಣನ ಮಗ ಆಗಿದ್ದರೂ ಭಯೋತ್ಪಾದನೆಗೆ ಸಂಬಂಧಿಸಿದವನಾದರೆ ಕಾನೂನಿನ ಮುಂದೆ ತರುವೆ ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಇಮ್ರಾನ್‍ಖಾನ್ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ ಬಡತನ, ಅನಕ್ಷರತೆಯ ವಿರುದ್ಧ ಒಗ್ಗೂಡಿ ಹೋರಾಡೋಣ ಎಂದು ಹೇಳಿದ್ದರು. ತಾನು ಪಠಾಣನ ಮಗ ಸತ್ಯದಲ್ಲಿ ನಿಂತೇ ಮಾತಾಡುವೆ ಮತ್ತುಕೆಲಸ ಮಾಡುವೆ ಎಂದು ಇಮ್ರಾನ್ ಖಾನ್ ಮೋದಿಗೆ ಹೇಳಿದ್ದರು. ಆದರೆ ಪಾಕಿಸ್ತಾನ ಪುಲ್ವಾಮ ಭಯೋತ್ಪಾದನಾ ದಾಳಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದುದಕ್ಕೆ ಪಾಕಿಸ್ತಾನವನ್ನು ಭಾರತ ಕಟುವಾಗಿ ಟೀಕಿಸಿದೆ.