ಸನ್ಮಾರ್ಗ ವಾರ್ತೆ
ಭಾರತ ವಿಭಜನೆಯ ಸಂದರ್ಭದಲ್ಲಿ ಬದುಕುಳಿದಿದ್ದ ರಾಮಕೃಷನ್ ಸಿಂಗ್ ಅವರು ಪಂಜಾಬ್ ನ ಪಾಟಿಯಾಲದಲ್ಲಿ ನಿಧನರಾಗಿದ್ದಾರೆ. ಇವರಿಗೆ 102 ವರ್ಷವಾಗಿತ್ತು. ಕೋಮು ಘರ್ಷಣೆಗಳಾಗುತ್ತಿದ್ದ ಆ ಕಾಲದಲ್ಲಿ ಇವರನ್ನು ಗ್ರಾಮದ ಮುಸ್ಲಿಮರು ರಕ್ಷಿಸಿದ್ದರು. ಆ ಉಪಕಾರವನ್ನು ತನ್ನ ಕೊನೆಗಾಲದವರೆಗೂ ರಾಮಕೃಷನ್ ಸಿಂಗ್ ಅವರು ನೆನಪಿಸಿಕೊಳ್ಳುತ್ತಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
ಭಾರತ ವಿಭಜನೆ ಯಾಗುವಾಗ 24 ವರ್ಷದವರಾಗಿದ್ದ ರಾಮ್ ಕೃಷನ್ ಸಿಂಗ್ ಅವರು ವಿಭಜನೆಯ ಸಮಯದ ಗಲಭೆಗೆ ಬೆದರಿ ತನ್ನ ಪರಿವಾರದೊಂದಿಗೆ ಹತ್ತಿರದ ಗ್ರಾಮಕ್ಕೆ ಪಲಾಯನ ಮಾಡಿದ್ರು. ಆದರೆ ಅವರ ತಂದೆ ಜೀವನ್ ಸಿಂಗ್ ಅವರು ಮನೆ ಬಿಟ್ಟು ಬರಲು ಒಪ್ಪಲಿಲ್ಲ. ತಾನು ಮನೆ ಕಾಯುವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳ ಒಂದು ಗುಂಪು ಅವರ ಗ್ರಾಮಕ್ಕೆ ದಾಳಿ ಮಾಡಿತು ಮತ್ತು ತಂದೆಯನ್ನು ಸಾಯಿಸಿತು ಎಂದು ಕ್ರಿಶನ್ ಸಿಂಗ್ ಹೇಳುತ್ತಾರೆ.
ಇದೇ ವೇಳೆ ಕ್ರಿಶನ್ ಸಿಂಗ್ ಇದ್ದ ಗ್ರಾಮಕ್ಕೂ ದುಷ್ಕರ್ಮಿಗಳ ಗುಂಪು ದಾಳಿ ಮಾಡಿತು. ಈ ಸಂದರ್ಭದಲ್ಲಿ ಅಲ್ಲಿನ ಮುಸ್ಲಿಮರು ಕ್ರಿಶನ್ ಸಿಂಗ್ ಅವರಿಗೆ ಕಾವಲು ನಿಂತರು. ಈ ಮೂಲಕ ಅವರ ಮತ್ತು ಪರಿವಾರದ ಜೀವವನ್ನು ಉಳಿಸಿದರು ಎಂದು ಅವರು ಸ್ಮರಿಸುತ್ತಾರೆ.












