ಹೈದರಾಬಾದಿನ ನಿಝಾಮ್‌ರ ಆಸ್ತಿಗೆ 120 ಹಕ್ಕುದಾರರು!

0
733

ಸನ್ಮಾರ್ಗ ವಾರ್ತೆ

ಹೈದರಾಬಾದ್,ಅ.5: ಭಾರತದ ವಿಭಜನೆಗೆ ಸಂಬಂಧಿಸಿ ಹೈದರಾಬಾದಿನ ನಿಝಾಮ್‌ರ ಲಂಡನ್‍ನ ಬ್ಯಾಂಕ್ ಅಕೌಂಟಿನಲ್ಲಿಟ್ಟ ಭಾರೀ ಮೊತ್ತದ ಠೇವಣಿ ಹಾಗೂ ಇತರ ಸೊತ್ತುಗಳಿಗೆ 120 ಹಕ್ಕುದಾರರು ಇದ್ದಾರೆ ಎಂದು ನಿಝಾಮರ ಮರಿಮೊಮ್ಮಗ ಹೇಳಿದ್ದಾರೆ. ನಿಝಾಮ್ ಏಳನೆಯ ನವಾಬ ಮೀರ್ ಉಸ್ಮಾನ್ ಅಲಿಖಾನ್ ಬಹದೂರ್ ಲಂಡನಿನ ನಾಟ್‍ ವೆಸ್ಟ್ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಮೂರುವರೆ ಕೋಟಿ ಪೌಂಡ್‍ಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತಕ್ಕೆ ಅನುಕೂಲಕರವಾಗಿ ಇಂಗ್ಲೆಂಡಿನ ಹೈಕೋರ್ಟು ತೀರ್ಪು ನೀಡಿದೆ. ಈ ಹಣವನ್ನು ನಿಝಾಮರ ಹಕ್ಕುದಾರರಾದ 120 ಮಂದಿಗೆ ಹಂಚಿ ಕೊಡಲು ನಿಝಾಮರ ಮರಿಮೊಮ್ಮಗ ನವಾಬ್ ನಜಾಫ್ ಅಲಿ ಖಾನ್ ಆಗ್ರಹಿಸಿದ್ದಾರೆ.

ನಿಝಾಮರ ಈಗಿನ ತಲೆಮಾರು ಎಂಟನೆ ನಿಝಾಮ್ ಪ್ರಿನ್ಸ್ ಮುಕರ್ರಂ ಝಾ, ಸಹೋದರ ಮುಫಖಂ ಝಾ ಕೇಸಿನಲ್ಲಿ ಭಾರತದೊಂದಿಗೆ ನಿಂತರು. ಆದರೆ ಇವರಿಗೆ ಮಾತ್ರ ಹಣ ಹಂಚಲು ಸಾಧ್ಯವಿಲ್ಲ ನಜಾಫ್ ಅಲಿ ಖಾನ್ ಹೇಳುತ್ತಿದ್ದಾರೆ. ಕುಟುಂಬ ಸದಸ್ಯರಾದ 120 ಮಂದಿಗೆ ನಿಝಾಮರ ಸೊತ್ತಿನಲ್ಲಿ ಹಕ್ಕಿದೆ. ಹಣವನ್ನು ಹಂಚುವ ಕುರಿತು ಮುಕರ್ರಂ ಝಾ ಮತ್ತು ಸಹೋದರರೊಂದಿಗೆ ಚರ್ಚೆ ಮಾಡುತ್ತಾರೆ. ಅವರು ಅದಕ್ಕೆ ಸಿದ್ಧರಿಲ್ಲದಿದ್ದರೆ ಕೋರ್ಟಿಗೆ ಹೊಗಲು ನಿಝಾಮ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ನಜಾಫ್ ಅಲಿಖಾನ್ ನಿರ್ಧರಿಸಿದ್ದಾರೆ.

ಲಂಡನ್‍ನ ನಾಟ್‍ವೆಸ್ಟ್ ಬ್ಯಾಂಕಿನಲ್ಲಿ ಮೂರುವರೆ ಕೋಟಿ ಪೌಂಡ್ ಸುಮಾರು 306 ಕೋಟಿ ರೂಪಾಯಿ ಠೇವಣಿಯಿದ್ದು ಭಾರತ ಮತ್ತು ಪಾಕಿಸ್ತಾನ ಕೇಸು ಹಾಕಿದೆ. ಇದು ಎಂಟನೆ ನಿಝಾಮ್ ಮತ್ತು ಭಾರತಕ್ಕೆ ಹಕ್ಕಿದೆ ಎಂದು ಕೋರ್ಟು ತೀರ್ಪಿನಲ್ಲಿ ಹೇಳಿತು. ಹಣದ ಕುರಿತ ಪಾಕಿಸ್ತಾನದ ವಾದವನ್ನು ಕೋರ್ಟು ನಿರಾಕರಿಸಿತು.

1984ರಲ್ಲಿ ಅಂದಿನ ಹೈದರಾಬಾದಿನ ನಿಝಾಮ 1,007,940 ಪೌಂಡ್ ಒಂಬತ್ತು ಶೆಲ್ಲಿಗೆ ಹೊಸದಾಗಿ ರೂಪುಗೊಂಡ ಪಾಕಿಸ್ತಾನದ ಬ್ರಿಟನ್‍ನ ಹೈಕಮಿಶನರ್‌ಗೆ ಹಸ್ತಾಂತರಿಸಿದ್ದರು. ಇದು ಮೂರುವರೆ ಕೋಟಿ ಪೌಂಡ್ ಆಗಿದೆ. ಈ ಹಣ ನಮ್ಮದೆಂದು ನಿಝಾಮರ ನಂತರದ ಪೀಳೀಗೆ ಹೇಳುತ್ತಿದೆ. ಅವರಿಗೆ ಭಾರತ ಬೆಂಬಲ ನೀಡಿತ್ತು. ಆದರೆ ಹಣ ತಮ್ಮದೆಂದು ಪಾಕಿಸ್ತಾನ ಹೇಳುತ್ತಿದೆ.

ಯಾರು ಹಣದ ನಿಜವಾದ ಹಕ್ಕುದಾರರು ಎಂದು ತಿಳಿಸಲು ಇಂಗ್ಲೆಂಡ್‍ನ ಕೋರ್ಟು ಈ ವರ್ಷ ಮೊದಲ ವಿಚಾರಣೆ ವೇಳೆ ಹೇಳಿತ್ತು. ಹೈದರಾಬಾದಿನ ನಿಝಾಮ್ ಯಾರು, ಉಸ್ಮಾನ್ ಅಲಿಖಾನ್ ವಿಭಜನೆಯ ವೇಳೆ ಯಾವ ದೇಶದೊಂದಿಗೆ ನಿಂತರು ಎಂಬ ಸಂದೇಹಗಳಿರುವಾಗಲೇ ಫಂಡ್ ಹಸ್ತಾಂತರವಾಗುತ್ತಿದೆ. ಆದರೆ, ನಂತರ ಈ ಫಂಡ್ ಅವರು ಪುನಃ ಕೇಳಿದ್ದರು. ಅಂದಿನ ಪಾಕಿಸ್ತಾನದ ಹೈಕಮಿಶನರ್ ಹಬೀಬ್ ಇಬ್ರಾಹೀಂ ರಹ್ಮತುಲ್ಲಾ ಖಾತೆಗೆ ಹಣವನ್ನು ಪಾವತಿಸಿದ ನಂತರ ನಾಟವೆಸ್ಟ್ ಬ್ಯಾಂಕ್ ತಡೆದಿಟ್ಟಿತ್ತು. ಹೈದರಾಬಾದಿಗೆ ಆಯುಧ ನೀಡುವ ಹಣ ಇದು ಎಂದು ಪಾಕಿಸ್ತಾನದ ವಾದಕ್ಕೆ ಸಾಕ್ಷ್ಯವಿಲ್ಲ ಎಂದು ಕೋರ್ಟು ಹೇಳಿದ್ದು ಪಾಕಿಸ್ತಾನ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.