ಐಟಿ ದಾಳಿ: ಉ.ಪ್ರದೇಶ ಉದ್ಯಮಿಯ ಮನೆಯಲ್ಲಿ 150 ಕೋಟಿ ರೂ. ಎಣಿಸಿದ ಅಧಿಕಾರಿಗಳು

0
259

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: 150 ಕೋಟಿ ರೂಪಾಯಿಯ ಕಪ್ಪುಹಣವನ್ನು ಎಣಿಸಿ ಆದಾಯ ತೆರಿಗೆ ಅಧಿಕಾರಿಗಳು ದಣಿದ ಘಟನೆಯೊಂದು ನಡೆದಿದೆ. ಕಾನ್ಪುರದ ವ್ಯಾಪಾರಿ ಪಿಯೂಶ್ ಜೈನ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ಮಾಡಿದಾಗ ಇಷ್ಟು ಮೊತ್ತದ ಕಪ್ಪುಹಣ ಸಿಕ್ಕಿದ್ದು ಇವರು ಸುಗಂಧ ದ್ರವ್ಯ ವ್ಯಾಪಾರಿಯಾಗಿದ್ದಾರೆ.

ಕಾನ್ಪುರ, ಮುಂಬೈ, ಗುಜರಾತ್‍ಗಳಲ್ಲಿ ಜೈನ್‍ರ ವ್ಯಾಪಾರ ಕ್ಷೇತ್ರವಿದೆ. ಆದಾಯ ತೆರಿಗೆ ಇಲಾಖೆ ಪರೀಶೀಲಿಸುತ್ತಿರುವ ಚಿತ್ರಗಳು ಹೊರ ಬಂದಿವೆ. ದೊಡ್ಡ ಅಲೆಮಾರಿನಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ನೋಟುಗಳನ್ನು ಅಟ್ಟಿಮಾಡಿಡಲಾಗಿತ್ತು. 30ರಷ್ಟು ನೋಟಿನ ಬಂಡಲ್‍ಗಳಿವೆ.
ಇನ್ನೊಂದು ಚಿತ್ರದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ನೆಲದಲ್ಲಿ ಕೂತು ನೋಟು ಎಣಿಸುವುದು ಕಾಣಿಸುತ್ತಿದೆ.

ತೆರಿಗೆ ವಂಚಿಸಿದ್ದಾರೆಂದು ಆನಂದ ಪುರಿಯ ಮನೆಯಲ್ಲಿ ಜಿಎಸ್‍ಟಿ ಇಲಾಖೆಯ ನೇತೃತ್ವದಲ್ಲಿ ಮೊದಲು ತಪಾಸಣೆ ನಡೆಯಿತು. ನಂತರ ಆದಾಯ ತೆರಿಗೆ ಇಲಾಖೆ ಪರಿಶೀಲಿಸುತ್ತಿದೆ. ತೆರಿಗೆ ವಂಚನೆ, ನಕಲಿ ಕಂಪೆನಿಗಳ ಇನ್‍ವಾಯಸ್‍ಗಳನ್ನು ಮಾಡಿ ಜಿಎಸ್ಟಿ ವಂಚಿಸಿದ್ದೆಂದು ಜಿಎಸ್‍ಟಿ ಅಧಿಕಾರಿಗಳು ಹೇಳಿದ್ದಾರೆ. 50,000ರೂಪಾಯಿಯ 200ಕ್ಕೂ ಹೆಚ್ಚು ಇಂತಹ ಇನ್‌ವಯಿಸ್‍ಗಳು ಪತ್ತೆಯಾಗಿದೆ.