ನಿಂತಿದ್ದ ಬಸ್‌ನಲ್ಲಿ ಬೆಂಕಿ ಅವಘಡ: ಇಬ್ಬರು ಸಜೀವ ದಹನ

0
327

ಸನ್ಮಾರ್ಗ ವಾರ್ತೆ

ರಾಂಚಿ: ರಾಂಚಿಯಲ್ಲಿ ನಿಂತಿದ್ದ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮವಾಗಿ ಇಬ್ಬರು ಸಜೀವ ದಹನವಾದ ಘಟನೆ ಸೋಮವಾರ ಮಧ್ಯರಾತ್ರೆ ಸಂಭವಿಸಿದ್ದು,, ಬಸ್ ಚಾಲಕ ಮದನ್ ಮೆಹತೊ(50) ಕ್ಲೀನರ್ ಇಬ್ರಾಹೀಂ(25) ಮೃತಪಟ್ಟವರು.

ಬಸ್ಸಿನೊಳಗೆ ಕ್ಯಾಂಡಲ್ ಉರಿಸಿದ್ದು ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದು, ತನಿಖೆ ಜಾರಿಯಲ್ಲಿದೆ.

ಬೆಂಕಿ ಹೊತ್ತಿಕೊಂಡ ವೇಳೆ, ಚಾಲಕ ಮತ್ತು ಸಹಾಯಕ ಬಸ್‍ನಲ್ಲಿ ನಿದ್ದೆ ಮಾಡುತ್ತಿದ್ದರು. ಇಬ್ಬರೂ ಮದ್ಯಪಾನ ಮಾಡಿದ್ದರಿಂದ ಅವರಿಗೆ ಬಸ್‍ಗೆ ಬೆಂಕಿ ಹಿಡಿದು ಅರಿವಿಗೆ ಬಂದಿರಲಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಅವರು ಬಸ್ ಇದ್ದಲ್ಲಿಗೆ ಧಾವಿಸುವಾಗ ಬಸ್ ಸಂಪೂರ್ಣ ಸುಟ್ಟು ಹೋಗಿತ್ತು.

ರಾಜೇಂದ್ರ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಘಟನೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಶೋಕ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಈ ನೋವನ್ನು ಸಹಿಸುವ ಶಕ್ತಿಯನ್ನು ದೇವನು ಕರುಣಿಸಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.