ಗೂಗಲ್‍ ಪಿಕ್ಸಲ್ 4 ವಿಫಲ; ಇಬ್ಬರು ಹಿರಿಯ ಇಂಜಿನಿಯರುಗಳಿಂದ ರಾಜೀನಾಮೆ

0
421

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಮೇ.15: ಗೂಗಲ್ ಸ್ಮಾರ್ಟ್‌ ಫೋನಿನಲ್ಲಿ  ಹೊಸ ವಿನ್ಯಾಸವಾದ ಗೂಗಲ್ ಪಿಕ್ಸಲ್4 ವಿಫಲಗೊಂಡ ಕಾರಣ ಕಂಪೆನಿಗೆ ಇಬ್ಬರು ಹಿರಿಯ ಇಂಜಿನಿಯರ್‌ಗಳು ರಾಜೀನಾಮೆ ನೀಡಿದ್ದಾರೆಂದು ದಿ ಇನ್ಫಾರ್ಮೇಶನ್ ವರದಿ ಮಾಡಿದೆ. ಫೋನ್‍ನ ಕ್ಯಾಮರಾ ಡಿಪಾರ್ಟ್ಮೆಂಟ್ ‌ನ ಮಾರ್ಕ್ ಲೆವಾಯ್, ಪಿಕ್ಸಲ್ ಜನರಲ್ ಮ್ಯಾನೇಜರ್ ಮಾರಿಯೊ ಎಕ್ವೆಯ್‍ರೋಸ್ ಜನವರಿ ಮತ್ತು ಮಾರ್ಚ್‌ನಲ್ಲಿ ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ.

ಇಬ್ಬರ ರಾಜೀನಾಮೆಯು ಫಿಕ್ಸಲ್ 4ರ ವೈಫಲ್ಯದಿಂದಾಗಿದೆಯೋ ಅಥವಾ ಸ್ವ ಇಚ್ಛೆಯಿಂದ ಅವರು ಕಂಪೆನಿ ಬಿಟ್ಟದ್ದೋ ಎಂಬ ವಿಚಾರದಲ್ಲಿ ದೃಢೀಕೃತವಾಗಿಲ್ಲ. ಮಾಜಿ ಗೂಗಲ್ ಸಿಇಒ ಎರಿಕ್ ಸ್ಮಿತ್ 19 ವರ್ಷ ಕೆಲಸ ಮಾಡಿ ರಾಜೀನಾಮೆ ಕೊಟ್ಟು ಪೆರಂಟ್ ಕಂಪೆನಿ ಲ್ಫಬಿಟ್‍ಗೆ ಹೋದ ಕೆಲವು ದಿವಸಗಳಲ್ಲಿ ಇಬ್ಬರು ಇಂಜಿನಿಯರ್ ಕಂಪೆನಿ ತೊರೆದ್ದಿದ್ದಾರೆ ಎಂದು ವರದಿಯಾಗಿತ್ತು.

ಪಿಕ್ಸಲ್ 3 , 3 ಎಕ್ಸ್‌ಎಲ್ ಮಾಡೆಲ್‍ಗಳು ಮಾರುಕಟ್ಟೆಯಲ್ಲಿ ವಿಜೃಂಭಿಸಿದ್ದವು.  ಪಿಕ್ಸಲ್ 4 ವಿಫಲವಾಗಿದ್ದು ಕಂಪೆನಿ ಸಮಸ್ಯೆಗೆ ಸಿಲುಕಿತ್ತು. ಹೆಚ್ಚು ಪ್ರಚಾರ ನೀಡಿದ್ದ ಸೋಲಿ ರೇಡಾರ್ ಚಿಪ್, ಮೋಶನ್ ಎಡ್ಜಸ್ಟರ್‍ಸ್ ಬರೇ ಗಿಮಿಕ್ಕೆಂದು ಗ್ರಾಹಕರ ಪ್ರತಿಕ್ರಿಯೂ ಗೂಗಲ್‍ಗೆ ಲಭಿಸಿತ್ತು.

ಇಂತಹ ಚಿಪ್‍ಗಳಿದ್ದ ಫೋನ್ ಹಲವು ಮುಂದುವರಿದ ದೇಶಗಳಲ್ಲಿ ಮಾರಾಟ ನಿರ್ಬಂಧ ಇರುವುದು ಗೂಗಲ್ ಪಾಲಿಗೆ ಹಿನ್ನಡೆಯೆನಿಸಿಕೊಂಡಿತು. ಪಿಕ್ಸಲ್ ಫೋನ್‍ಗಳಿಗೆ ಮಾರುಕಟ್ಟೆಯಿರುವ ಭಾರತ ಮತ್ತು ಅಂತಹುದೇ ಇತರ ದೇಶಗಳಿಗೆ ಈ ಫೋನ್ ಬಂದು ತಲುಪಿಲ್ಲ.