ಇಸ್ರೇಲ್‌ ನರಮೇಧಕ್ಕೆ 2 ವರ್ಷ; ಗಾಜಾದಲ್ಲಿ ಸಾವಿನ ಸಂಖ್ಯೆ 42,000

0
65

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ನಿರಂತರ ದಾಳಿಯಲ್ಲಿ ಕನಿಷ್ಠ 56 ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ. ಕಳೆದ ವರ್ಷದಿಂದ ಒಟ್ಟಾರೆ ಸಾವಿನ ಸಂಖ್ಯೆ 41,965 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ದಾಳಿಯಲ್ಲಿ ಸುಮಾರು 97,590 ಮಂದಿ ಗಾಯಗೊಂಡಿದ್ದು, ಕಳೆದ 24 ಗಂಟೆಗಳಲ್ಲಿ ನಡೆದ ಮೂರು ದಾಳಿಯಲ್ಲಿ ಇಸ್ರೇಲಿ ಪಡೆಗಳು 56 ಜನರನ್ನು ಕೊಂದವು ಮತ್ತು 278 ಇತರರು ಗಾಯಗೊಂಡಿದ್ದಾರೆ” ಎಂದು ಸಚಿವಾಲಯ ತಿಳಿಸಿದೆ.

“ರಕ್ಣಣಾ ಪಡೆಗಳು ತಲುಪಲು ಸಾಧ್ಯವಾಗದ ಕಾರಣ, ಅನೇಕ ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಮತ್ತು ರಸ್ತೆಗಳಲ್ಲೂ ಸಿಲುಕಿಕೊಂಡಿದ್ದಾರೆ” ಎಂದು ಸಚಿವಾಲಯ ಹೇಳಿದೆ.

ಯುಎನ್ ಭದ್ರತಾ ಮಂಡಳಿಯು ಕದನ ವಿರಾಮಕ್ಕೆ ಕರೆ ನೀಡಿದ್ದರೂ ಅದನ್ನು ಉಲ್ಲಂಘಿಸಿ, ಅಕ್ಟೋಬರ್ 7, 2023 ರಂದು ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ತನ್ನ ಕ್ರೂರ ಆಕ್ರಮಣವನ್ನು ಮುಂದುವರೆಸಿದೆ.

ಆಹಾರ, ಶುದ್ಧ ನೀರು ಮತ್ತು ಔಷಧಗಳ ತೀವ್ರ ಕೊರತೆಗೆ ಕಾರಣವಾದ ದಿಗ್ಬಂಧನದ ಮಧ್ಯೆ, ಇಸ್ರೇಲಿ ದಾಳಿಯು ಪ್ರದೇಶದ ಬಹುತೇಕ ಸಂಪೂರ್ಣ ಜನಸಂಖ್ಯೆಯನ್ನು ಸ್ಥಳಾಂತರಿಸಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಗಾಜಾ ಕದನಕ್ಕೆ ಸಂಬಂಧಿಸಿದಂತೆ ಕದನ ವಿರಾಮ ಮತ್ತು ಖೈದಿಗಳ ವಿನಿಮಯ ಒಪ್ಪಂದಕ್ಕೆ ಸಂಬಂಧಿಸಿ ಯುಎಸ್, ಈಜಿಪ್ಟ್ ಮತ್ತು ಕತಾರ್ ನೇತೃತ್ವದ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದ ಕಾರಣ ಸಂಧಾನ ವಿಫಲವಾಗಿದೆ.

ಗಾಜಾ ಹತ್ಯಾಕಾಂಡದ ಬಗ್ಗೆ ಇಸ್ರೇಲ್ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧದ ಪ್ರಕರಣವನ್ನು ಎದುರಿಸುತ್ತಿದೆ.