ಅಮೇರಿಕಾ: ವರ್ಣಬೇಧ ನೀತಿಯ ವಿರುದ್ಧ ತೀವ್ರಗೊಂಡ ಪ್ರತಿಭಟನೆ; ಶ್ವೇತಭವನದ ಬಳಿಯ 200 ವರ್ಷಗಳ ಹಳೆಯ ಚರ್ಚ್‌ ಬೆಂಕಿಗಾಹುತಿ

0
1329

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.1:ವರ್ಣಬೇಧ ನೀತಿಗೆ ಅಮೇರಿಕಾದಲ್ಲಿ ಜಾರ್ಜ್ ಫ್ಲಾಯ್ಡ್ ಪೊಲೀಸರ ಕೈಯಲ್ಲಿ ಸಾವನ್ನಪ್ಪಿದ ಬಳಿಕ ಅಮೇರಿಕಾದಾದ್ಯಂತ ಪ್ರತಿಭಟನೆಗಳು ತೀವ್ರ ರೂಪ ಪಡೆದಿವೆ. ಇದೀಗ 50 ರಾಜ್ಯಗಳ ಪೈಕಿ 40 ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಅವಧಿಯಲ್ಲಿ ಹಿಂಸಾಚಾರವೂ ಸಂಭವಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಫ್ಲಾಯ್ಡ್ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಪ್ರತಿಭಟನಾಕಾರರು ಈಗ ಶ್ವೇತಭವನವನ್ನು ತಲುಪಿದ್ದಾರೆ ಎಂಬುದು ಆಡಳಿತದ ಕಳವಳ.

ಭಾನುವಾರ ತಡವಾಗಿ, ಪ್ರತಿಭಟನಾಕಾರರು ಶ್ವೇತಭವನದಿಂದ ಕೆಲವು ಮೀಟರ್ ದೂರದಲ್ಲಿರುವ 200 ವರ್ಷಗಳ ಹಳೆಯ ಸೆಂಟ್ ಜಾನ್ಸ್ ಚರ್ಚ್‌ಗೆ ಬೆಂಕಿ ಹಚ್ಚಿದರು. 1816 ರಲ್ಲಿ ನಿರ್ಮಿಸಲಾದ ಈ ಚರ್ಚ್ ಅನ್ನು ‘ಚರ್ಚ್ ಆಫ್ ಪ್ರೆಸಿಡೆಂಟ್ಸ್’ ಎಂದೂ ಕರೆಯಲಾಗುತ್ತಿತ್ತು. ಶ್ವೇತಭವನದಲ್ಲಿ ವಾಸಿಸುವ ಪ್ರತಿಯೊಬ್ಬ ಅಮೇರಿಕನ್ ಅಧ್ಯಕ್ಷರು ಇಲ್ಲಿಗೆ ಬರುವುದು ವಾಡಿಕೆಯಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇ‌ಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.