ಪಾಕಿಸ್ತಾನದ ಜೈಲಿನಿಂದ 2110 ಮಂದಿ ಭಾರತಕ್ಕೆ

0
477

ಹೊಸದಿಲ್ಲಿ, ಜು. 18: ಪಾಕಿಸ್ತಾನದ ಜೈಲುಗಳಲ್ಲಿದ್ದ 2210 ಭಾರತೀಯ ಕೈದಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿದೇಶ ಸಚಿವಾಲಯ ತಿಳಿಸಿದೆ. ಮೀನುಗಾರರು ಕೂಡ ಇವರಲ್ಲಿದ್ದಾರೆ. 2014ರ ನಂತರದ ಲೆಕ್ಕವಿದು. ಈ ವರ್ಷ 362 ಮಂದಿಯನ್ನು ಕರೆತರಲಾಗಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ವಿದೇಶ ಸಹಸಚಿವ ವಿ. ಮುರಳೀಧರನ್ ಹೇಳಿದರು.

ಪಾಕಿಸ್ತಾನದ ಸೆರೆಯಲ್ಲಿದ್ದವರಲ್ಲಿ ಹೆಚ್ಚಿನವರು ಮೀನುಗಾರರು. ಪ್ರತಿವರ್ಷ ಪಾಕಿಸ್ತಾನ ಸೆರೆಹಿಡಿದವರ ಲೆಕ್ಕವನ್ನು ಸಚಿವರು ಸದನಕ್ಕೆ ತಿಳಿಸಿದರು. ಲಭ್ಯ ಲೆಕ್ಕ ಪ್ರಕಾರ 273 ಭಾರತೀಯರು ಪಾಕಿಸ್ತಾನದ ಜೈಲಿನಲ್ಲಿದ್ದಾರೆ. ಅವರಲ್ಲಿ 209 ಮಂದಿ ಮೀನುಗಾರರು. 209 ಮೀನುಗಾರರ ಲೆಕ್ಕವನ್ನು ಪಾಕಿಸ್ತಾನ ಅಂಗೀಕರಿಸಿದೆ. ಆದರೆ 52 ಸಾಮಾನ್ಯ ಪ್ರಜೆಗಳು ಪಾಕಿಸ್ತಾನದ ಜೈಲಿನಲ್ಲಿದೆ ಎಂದು ಪಾಕಿಸ್ತಾನ ಹೇಳುತ್ತಿದೆ ಎಂದು ಸಚಿವರು ಹೇಳಿದರು.