ಸನ್ಮಾರ್ಗ ವಾರ್ತೆ
2040ರ ವೇಳೆಗೆ ಜಪಾನ್ ನ ಶೇಕಡ 30ರಷ್ಟು ಬೌದ್ಧ ಮಂದಿರಗಳು ಕಣ್ಣರೆಯಾಗಬಹುದು ಎಂಬ ವರದಿಗಳು ಬಂದಿವೆ . ಇದರ ಬೆನ್ನಿಗೆ ಜಪಾನ್ ನ ಕೆಲವು ಬೌದ್ಧ ಸನ್ಯಾಸಿಗಳು ಈಗ ಏ ಐ ಕಡೆಗೆ ಮುಖ ಮಾಡುತ್ತಿದ್ದಾರೆ. ಧಾರ್ಮಿಕ ವಾಗಿ ನಡಕೊಳ್ಳುವವರ ಸಂಖ್ಯೆ ಕುಸಿಯುತ್ತಿರುವುದರಿಂದ ಬೌದ್ಧ ಸನ್ಯಾಸಿಗಳು ಏ ಐಯತ್ತ ಮುಖ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ..ಬೌದ್ಧ ಧರ್ಮದತ್ತ ಜನರನ್ನು ಆಕರ್ಷಿಸುವುದು ಮತ್ತು ಆಧ್ಯಾತ್ಮಿಕ ಅಭ್ಯಾಸವನ್ನು ಬೆಂಬಲಿಸುವುದು ಇದರ ಉದ್ದೇಶವಾಗಿದೆ.
ಕನಗಾವ ಪ್ರಾಂತ್ಯದ ಒಡವಾರಾ ನಗರದ ಬೌದ್ಧ ಮಂದಿರದ ಸನ್ಯಾಸಿ ಅವರು ಎಐ ಸಂಶೋಧನೆಯ ಪ್ರಮುಖರಲ್ಲಿ ಒಬ್ಬರು. ಕೋವಿಡ್ ಕಾಲದಲ್ಲಿ ಇವರು ಆನ್ಲೈನ್ ಜೆನ್ ಧ್ಯಾನ ಸೇವೆಯನ್ನು ಆರಂಭಿಸಿದರು.
ಇವರು ದೇವಾಲಯದ ದೈನಂದಿನ ಕಾರ್ಯಾಚರಣೆಗಳಲ್ಲಿ ಎಐ ಸಂಯೋಜಿಸಲು ಪ್ರಾರಂಭಿಸಿದ್ದಾರೆ. ಎ ಐ ಬೆದರಿಕೆಯಾಗಿ ನೋಡುವ ಬದಲು ಸನ್ಯಾಸಿಗಳಾದ ನಾವು ಅದನ್ನು ನಮ್ಮ ಧಾರ್ಮಿಕ ಸಂಪರ್ಕ ಪ್ರಯತ್ನಗಳಲ್ಲಿ ಹೇಗೆ ಸೇರಿಸಿಕೊಳ್ಳಬಹುದು ಎಂಬುದರತ್ತ ಯೋಚಿಸಬೇಕು ಎಂದವರು ಹೇಳಿದ್ದಾರೆ












