ಕೇರಳ ಮೂಲದ ಲುಲು ಗ್ರೂಪ್‍ನಿಂದ ಸೌದಿಅರೇಬಿಯದಲ್ಲಿ ಉದ್ಯಮ ವಿಸ್ತರಣೆ

0
1169

ದಿಲ್ಲಿ,ಫೆ.25: ಸೌದಿ ಅರೇಬಿಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಾಬಲ್ಯಹೊಂದುವ ಯೋಜನೆಯೊಂದಿಗೆ ಲುಲು ಗ್ರೂಪ್ ತಮ್ಮ ವ್ಯವಹಾರವನ್ನು ವಿಸ್ತರಿಸುತ್ತಿದೆ. ಸೌದಿ ಅರೇಬಿಯದ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ ಭಾರತ ಸಂದರ್ಶಿಸಿದ ಸಮಯದಲ್ಲಿ ಭಾರತ-ಸೌದಿ ಅರೇಬಿಯಗಳ ಬಿಸಿನೆಸ್ ಫಾರಂನಲ್ಲಿ ಈ ವಿಷಯವನ್ನು ಲುಲು ಗ್ರೂಪ್ ಅಧ್ಯಕ್ಷ ಎಂ.ಐ.ಯೂಸುಫಲಿ ತಿಳಿಸಿದ್ದರು.

ಸೌದಿಅರೇಬಿಯದ ರಿಟೈಲ್ ಕ್ಷೇತ್ರದಲ್ಲಿ ಲುಲುಗ್ರೂಪ್ ಜಾರಿಗೊಳಿಸುವ ವಿವಿಧ ಯೋಜನೆಗಳು ಮತ್ತು ಹೂಡಿಕೆಗಳ ಕುರಿತು ಯೂಸುಫಲಿ ಫಾರಂ ಮುಂದೆ ವಿವರಿಸಿದ್ದು ಸೌದಿಯ ವಾಣಿಜ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳಕ್ಕೆ ಲುಲು ಗ್ರೂಪ್ ಬಯಸುತ್ತಿದೆ ಎಂದು ಯೂಸುಫಲಿ ಹೇಳಿದರು. ಈಗಾಲೇ ಯೂಸುಫ್ ಅಲಿಯ ಲುಲು ಗ್ರೂಪ್ ಸೌದಿ ಅರೇಬಿಯದಲ್ಲಿ 15 ಹೈಪರ್ ಮಾರ್ಕೆಟ್‍ನಗಳನ್ನು ಲುಲುಗ್ರೂಪ್ ಹೊಂದಿದೆ. 2020ಕ್ಕಾಗುವಾಗ ಇನ್ನೂ ಇಪ್ಪತ್ತು ಹೈಪರ್ ಮಾರ್ಕೆಟ್‍ಗಳನ್ನು ಹೊಸದಾಗಿ ಆರಂಭಿಸಲು ಲುಲುಗ್ರೂಪ್ ಮುಂದೆ ಬಂದಿದೆ. ಇದಕ್ಕಾಗಿ 100 ಕೋಟಿ ರಿಯಾಲ್ ಗ್ರೂಪ್ ಹೂಡಿಕೆ ಮಾಡಲಿದೆ.