2024ರಲ್ಲಿ 4,300 ಮಿಲಿಯನೇರ್‌ಗಳು ದೇಶ ತೊರೆಯಲು ಸನ್ನದ್ಧ; ದೇಶ ಬಿಡುವುದರಲ್ಲಿ ಜಗತ್ತಿನಲ್ಲಿಯೇ ಭಾರತಕ್ಕೆ ಮೂರನೇ ಸ್ಥಾನ: ವರದಿ

0
275

ಸನ್ಮಾರ್ಗ ವಾರ್ತೆ

ಈ ವರ್ಷ 4,300 ಮಂದಿ ಶತಕೋಟ್ಯಾಧಿಪತಿಗಳು ಭಾರತವನ್ನು ಬಿಟ್ಟು ಹೋಗಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.

ಬ್ರಿಟಿಷ್ ಇನ್ವೆಸ್ಟ್ಮೆಂಟ್ ಕನ್ಸಲ್ಟೆನ್ಸಿಯಾದ ಹೆನ್ಲಿ ಅಂಡ್ ಪಾರ್ಟ್ನರ್ಸ್ ಎಂಬ ಸಂಸ್ಥೆ ಈ ಕುರಿತಂತೆ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಇವರಲ್ಲಿ ಹೆಚ್ಚಿನವರು ಯುಏಯಿಯನ್ನು ಶಾಶ್ವತ ನೆಲೆಯಾಗಿ ಮಾಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಶತಕೋಟ್ಯಾಧಿಪತಿಗಳು ದೇಶ ಬಿಡುವುದರಲ್ಲಿ ಜಗತ್ತಿನಲ್ಲಿಯೇ ಭಾರತ ಮೂರನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ ಯುಕ್ರೇನ್ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಸಾವಿರ ಶತಕೋಟ್ಯಾಧೀಶರಾದರೂ ದೇಶ ಬಿಡುತ್ತಿದ್ದು ಈ ವರ್ಷ ಭಾರಿ ಸಂಖ್ಯೆಯಲ್ಲಿ ದೇಶ ಬಿಡಲು ಶತಕೋಟ್ಯಾಧಿಪತಿಗಳು ಸಿದ್ದರಾಗಿದ್ದಾರೆ ಎಂದು ತಿಳಿದುಬಂದಿದೆ.

ಜಾಗತಿಕವಾಗಿ ಯುಎಇ ಮತ್ತು ಅಮೆರಿಕ ಹೀಗೆ ವಲಸೆ ಹೋಗುವ ಕೋಟ್ಯಾಧಿಪತಿಗಳಿಗೆ ನೆಚ್ಚಿನ ದೇಶವಾಗಿದೆ. ಈ ವರ್ಷ 1,28,000 ಶತಕೋಟ್ಯಾಧಿಪತಿಗಳು, ವಲಸೆ ಹೋಗಲಿದ್ದಾರೆ ಎಂದು ತಿಳಿದುಬಂದಿದೆ