ಬಲಪಂಥೀಯ ಕಾರ್ಯಕರ್ತರಿಂದ ಇಬ್ಬರು ಕಾಶ್ಮೀರಿ ವ್ಯಾಪಾರಿಗಳಿಗೆ ಲಕ್ನೊದ ರಸ್ತೆಯಲ್ಲಿ ಹಲ್ಲೆ: ಸ್ಥಳೀಯರಿಂದ ರಕ್ಷಣೆ

0
1241

ಲಕ್ನೊ,ಮಾ.7: ಕಾಶ್ಮೀರದ ಒಣ ಹಣ್ಣು ವ್ಯಾಪಾರಿಗಳಿಗೆ ಉತ್ತರಪ್ರದೇಶದ ರಾಜಧಾನಿ ಲಕ್ನೊದಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ನಿನ್ನೆ ಹಲ್ಲೆ ನಡೆಸಿದ್ದಾರೆ. ಲಕ್ನೊದ ಜನಭರಿತ ರಸ್ತೆಯ ಬದಿಯಲ್ಲಿ ವ್ಯಾಪಾರಕ್ಕೆ ಅವರು ಕುಳಿತಿದ್ದರು. ಹಲ್ಲೆಕೋರರಲ್ಲೊಬ್ಬ ವೀಡಿಯೊವನ್ನು ಶೇರ್ ಮಾಡಿದ್ದಾನೆ. ಒಬ್ಬನನ್ನು ಬಂಧಿಸಲಾಗಿದೆ. ಕೇಂದ್ರ ಲಕ್ನೊದ ದಲಿಗಂಜ್‍ನಲ್ಲಿ ನಿನ್ನೆ ಸಂಜೆ ಐದು ಗಂಟೆಗೆ ಘಟನೆ ನಡೆದಿದೆ ಎಂದು ಎನ್‍ಡಿಟಿ ವರದಿಮಾಡಿದೆ.

ಕಾಶ್ಮೀರಿಗಳೆನ್ನುವ ಕಾರಣಕ್ಕಾಗಿ ಹಲ್ಲೆ ಮಾಡಿದ್ದೆವೆಂದು ಹಲ್ಲೆಕೋರರು ಹೇಳಿದರು. ಕೇಸರಿ ಕುರ್ತಾ ಧರಿಸಿದ್ದವರು ಕಾಶ್ಮೀರದ ಇಬ್ಬರು ವ್ಯಾಪಾರಿಗಳಿಗೆ ಹಲ್ಲೆ ನಡೆಸುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ವ್ಯಾಪಾರಿಗಳ ಒಣಹಣ್ಣು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಒರ್ವ ಹಲ್ಲೆಯಿಂದ ಪಾರಾಗಲು ಕೈಗಳು ತಲೆಯ ಮೇಲೆ ಇಟ್ಟುಕೊಳ್ಳುತ್ತಾ ಹೊಡೆಯಬೇಡಿ ಎಂದು ಹೇಳುತ್ತಿದ.

ಸ್ಥಳೀಯ ನಿವಾಸಿಗಳು ಕಾಶ್ಮೀರದ ವ್ಯಾಪಾರಿಗಳಿಗೆ ಹಲ್ಲೆ ನಡೆಸದಂತೆ ದುಷ್ಕರ್ಮಿಗಳನ್ನು ತಡೆದರು. ಕಾನೂನು ಕೈಗೆತ್ತಿಕೊಳ್ಳಬೇಡಿ, ಪೊಲೀಸರಿಗೆ ಫೋನ್‍ ಮಾಡಿ ಎಂದು ಸ್ಥಳೀಯರಲ್ಲೊಬ್ಬ ಹೇಳುವುದು ಕೇಳಿಸುತ್ತಿದೆ.

ಲಕ್ನೊದಲ್ಲಿ ಹಲವು ವರ್ಷಗಳಿಂದ ಕಾಶ್ಮೀರಿಗಳು ಒಣ ಹಣ್ಣು ವ್ಯಾಪಾರ ಮಾಡುತ್ತಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದು ಬಜರಂಗ್ ಸೋನ್‍ಕರ್ ಎಂಬಾತನನ್ನು ಬಂಧಿಸಿದರು. ದುಷ್ಕರ್ಮಿಗಳಲ್ಲಿ ಒಬ್ಬ ತನ್ನನ್ನು ವಿಶ್ವ ಹಿಂದೂ ದಳದ ಅಧ್ಯಕ್ಷ ಎಂದು ಹೇಳಿಕೊಂಡಿದ್ದು ಆತನ್ನು ಬಂಧಿಸಲಾಗಿಲ್ಲ.