ಭಾರತದ ಮಿಸೈಲ್ ಪರೀಕ್ಷೆ: ಅಂತರಿಕ್ಷ ಮಾಲಿನ್ಯದ ಕುರಿತು ಮುನ್ನೆಚ್ಚರಿಕೆ ನೀಡಿದ ಅಮೆರಿಕ!

0
1119

ವಾಷಿಂಗ್ಟನ್,ಮಾ. 28: ಉಪಗ್ರಹ ಬೇಧಕ ಮಿಸೈಲ್ ಪರೀಕ್ಷೆ ನಡೆಸುವುದರಿಂದ ಅಂತರಿಕ್ಷದಲ್ಲಿ ಮಾಲಿನ್ಯಗಳಾಗುವುದು ಆಯಾ ದೇಶಗಳಿಗೆ ಗೊತ್ತಿರಬೇಕೆಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪಾಟ್ರಿಕ್ ಶನಾಹನ್ ಹೇಳಿದರು. ಇಂತಹ ಪರೀಕ್ಷೆಗಳಿಂದಾಗು ಮಾಲಿನ್ಯಗಳು ಬಾಹ್ಯಾಕಾಶದಲ್ಲಿ ಹಾನಿ ಸೃಷ್ಟಿಸಬಹುದು. ಈ ವಿಷಯ ಎಲ್ಲರಿಗೂ ಗೊತ್ತಿರಲಿ. ಭಾರತದ ಉಪಗ್ರಹ ಬೇಧಕ ಮಿಸೈಲ್ ಪರೀಕ್ಷೆಯ ನಂತರ ಅಂತರಿಕ್ಷದಲ್ಲಿ ಸಂಭವಿಸಿದ ಪರಿಣಾಮಗಳನ್ನು ಅಮೆರಿಕ ಅಧ್ಯಯನ ನಡೆಸುತ್ತಿದೆ ಎಂದು ಪಾಟ್ರಿಕ್ ಹೇಳಿದರು. ನಾವೆಲ್ಲ ಬಾಹ್ಯಾಕಾಶದಲ್ಲಿ ಬದುಕುತ್ತೇವೆ. ಆದ್ದರಿಂದ ಅಲ್ಲಿ ಏರುಪೇರು ಸಂಭವಿಸಬಾರದು. ಅದು ಬಿಸಿನೆಸ್ ಮಾಡುವ ಸ್ಥಳವಾಗಿರಬೇಕು. ಜನರಿಗೆ ಚಟುವಟಿಕೆ ಸ್ವಾತಂತ್ರ್ಯ ಇರುವ ಸ್ಥಳ ಅದಾಗಿರಬೇಕು ಎಂದು ಪಾಟ್ರಿಕ್ ಹೇಳಿದರು. ಇದೇ ವೇಳೆ ಅಂತರಿಕ್ಷದಲ್ಲಿ ಮಾಲಿನ್ಯ ಆಗುವ ಸಾಧ್ಯತೆಯನ್ನು ವಿದೇಶ ಸಚಿವಾಲಯ ತಳ್ಳಿ ಹಾಕಿದೆ. ಎಲ್ಲ ಮಾಲಿನ್ಯಗಳು ಸಂಪೂರ್ಣ ನಾಶವಾಗಿ ಭೂಮಿಗೆ ಬೀಳುತ್ತವೆ ಎಂದು ವಿದೇಶ ಸಚಿವಾಲಯ ವಾದಿಸುತ್ತಿದೆ.