ಮುಸ್ಲಿಮರ ವಿಷಯದಲ್ಲಿ ಚೀನ ದ್ವಂದ ನಿಲುವು ಹೊಂದಿದೆ- ಅಮೆರಿಕ

0
698

ವಾಷಿಂಗ್ಟನ್,ಮಾ. 28: ಮುಸ್ಲಿಮರ ವಿಷಯದಲ್ಲಿ ಚೀನ ದ್ವಂದ್ವ ನಿಲುವನ್ನು ಹೊಂದಿದೆ ಎಂದು ಅಮೆರಿಕದ ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದರು. ಒಂದು ಕಡೆ ಲಕ್ಷಾಂತರ ಮುಸ್ಲಿಮರ ಮೇಲೆ ಚೀನ ದೌರ್ಜನ್ಯ ನಡೆಸುತ್ತಿದೆ. ಇನ್ನೊಂದು ಕಡೆ ಮುಸ್ಲಿಂ ಭಯೋತ್ಪಾದಕರಿಗೆ ವಿಶ್ವಸಂಸ್ಥೆ ಸಹಿತ ಹಲವು ಕಡೆ ಚೀನ ನೆರವಾಗುತ್ತಿದೆ ಎಂದು ಪೊಂಪಿಯೊ ಟ್ವಿಟರ್‍ನಲ್ಲಿ ಆರೋಪಿಸಿದ್ದಾರೆ.

ಉಯಿಗುರ್ ಮುಸ್ಲಿಮರ ಮೇಲೆ ಚೀನಾ ನಡೆಸುತ್ತಿರುವ ದಬ್ಬಾಳಿಕೆಯನ್ನು ಬೆಟ್ಟು ಮಾಡಿ ಪೊಂಪಿಯೊ ಹೇಳಿಕೆ ನೀಡಿದ್ದಾರೆ. ಇದೇವೇಳೆ, ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ನನ್ನು ಕಪ್ಪಪಟ್ಟಿಗೆ ಸೇರಿಸುವ ವಿಚಾರದಲ್ಲಿ ಚೀನ ನಕಾರಾತ್ಮಕವಾಗಿ ವರ್ತಿಸುತ್ತಿದೆ ಎಂದು ಪೊಂಪಿಯೊ ಹೇಳಿದರು. ಚೀನದ ದೌರ್ಜನ್ಯದ ಕುರಿತು ಬಹಿರಂಗವಾಗಿ ಹೇಳಿದ ಉಯಿಗುರ್ ನಿವಾಸಿ ಮಿಹಿರಿಗುಲ್ ತುರ್ಸನ್‍ರೊಂದಿಗೆ ಪೊಂಪಿಯೊ ಇತ್ತೀಚಿಗೆ ಚರ್ಚಿಸಿದ್ದರು. ನಂತರ ಅವರು ಚೀನದ ವಿರುದ್ಧ ಟೀಕೆ ಮಾಡಿದ್ದಾರೆ.