ರಾಜ್ಯದಲ್ಲಿ ಶೇ.60 ರಷ್ಟು ಡೆಂಗ್ಯೂ ಪ್ರಕರಣ ಹೆಚ್ಚಳ

0
214

ಸನ್ಮಾರ್ಗ ವಾರ್ತೆ

2023ಕ್ಕೆ ಹೋಲಿಕೆ ಮಾಡಿದರೇ ರಾಜ್ಯದಲ್ಲಿ ಈ ಬಾರಿ ಶೇ.60 ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, 2023ರ ಜೂನ್​ನಲ್ಲಿ ಒಟ್ಟು 2,003 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ವರ್ಷ ಜೂನ್​ನಲ್ಲಿ​ 4,886 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,230 ಡೆಂಗ್ಯೂ ಪ್ರಕರಣಗಳು ಕಂಡು ಬಂದಿದೆ.

ಇನ್ನು ಬೆಂಗಳೂರಿನಲ್ಲಿಯೂ ಕೂಡ ಡೆಂಗ್ಯೂ ಪ್ರಕರಣಗಳ ಏರಿಕೆಯಾಗಿದೆ. ರಾಜ್ಯದಲ್ಲಿ ಶೇ.60 ರಷ್ಟು ಜನರಿಗೆ ಡೆಂಗ್ಯೂ ಬಂದಿದೆ. ಜತೆಗೆ ಇನ್ನಿತರ ಜ್ವರದ ಪ್ರಕರಣ​ಗಳು ಏರಿಕೆ ಕಂಡಿವೆ. ಕಳೆದ ಮೇ ತಿಂಗಳಿನಲ್ಲಿ ಇದ್ದ 727 ಡೆಂಗ್ಯೂ ಪ್ರಕರಣಗಳು ಕಳೆದ 20 ದಿನದಲ್ಲಿ 1,230 ಪ್ರಕರಣಗಳು ವರದಿಯಾಗಿವೆ. ಜೂನ್‌ನಲ್ಲಿಯೇ ಡೆಂಗ್ಯೂ ಸಂಖ್ಯೆ ಏರಿಕೆಯಾಗಿದೆ.

ಜನವರಿಯಿಂದ ಜೂ.24ರ ವರೆಗೆ 2,457 ಕೇಸ್ ಪತ್ತೆಯಾಗಿವೆ. ಇನ್ನು ರಾಜ್ಯದಲ್ಲಿ ಜನವರಿಯಿಂದ ಜೂನ್ 20ರವರೆಗೆ 7,343ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಕಂಡು ಬಂದಿದೆ. ಈ ಮೂಲಕ ಶೇ.60 ರಷ್ಟು ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿವೆ.