2020ರ ಟಿ20 ವಿಶ್ವಕಪ್ ನಂತರ ನಿವೃತ್ತಿ: ಮಲಿಂಗ ಘೋಷಣೆ

0
665

ಶ್ರೀಲಂಕಾದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಲಸಿತ್ ಮಲಿಂಗ ಮುಂಬರುವ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯದ ನಂತರ ಕ್ರಿಕೆಟ್‍ನಿಂದ ನಿವೃತ್ತರಾಗುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯದಲ್ಲಿ 2020 ಅಕ್ಟೋಬರ್‍ನಿಂದ ನವೆಂಬರ್‍ವರೆ ವಿಶ್ವಕಪ್ ಟಿ20 ಕ್ರಿಕೆಟ್ ಟೂರ್ನಿ ನಡೆಯಲಿದೆ. ಇದೇ ವೇಳೆ ಇಂಗ್ಲೆಂಡಿನಲ್ಲಿ ನಡೆಯುವ ಏಕದಿನ ವಿಶ್ವ ಕಪ್‍ನ ನಂತರ ಏಕದಿನ ಕ್ರಿಕೆಟ್‍ನಿಂದಲೂ ನಿವೃತ್ತರಾಗುವುದಾಗಿ ಶುಕ್ರವಾರ ತಿಳಿಸಿದರು.

“ವಿಶ್ವಕಪ್ ನಂತರ ನನ್ನ ಕ್ರಿಕೆಟ್ ಜೀವನ ಕೊನೆಯಾಗಲಿದೆ ಎಂದು 35ರ ಹರೆಯದ ಲಸಿಂತ್ ಮಲಿಂಗ ಹೇಳಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿಟ್ವೆಂಟಿ ಪಂದ್ಯವನ್ನು ಅವರ ತಂಡ ಹದಿನಾರು ರನ್‍ಗಳಿಂದ ಗೆದ್ದುಕೊಂಡ ಬಳಿಕ ಅವರು ಮಾತಾಡುತ್ತಿದ್ದರು. ನಾನು ವಿಶ್ವಕಪ್ ಟಿಟ್ವೆಂಟಿ ಆಡಲು ಬಯಸುತ್ತಿದ್ದೇನೆ. ನಂತರ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವೆ ಎಂದು ಅವರು ಹೇಳಿದರು. ಮಲಿಂಗ ಸೂಪರ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕದ ಅಗ್ರ ಸ್ಕೋರರ ರೀಝ ಹೆಂಡ್ರಿಕ್ಸ್ ವಿಕೆಟನ್ನು ಪಡೆದಿದ್ದರು. ಅವರ ಟಿಟ್ವೆಂಟಿ ಜೀವನದ 97ನೆ ವಿಕೆಟ್ ಆಗಿದೆ. ವಿಶ್ವ ದಾಖಲೆಗೆ ಒಂದು ವಿಕೆಟ್ ಕಡಿಮೆ ಇದೆ. ಟಿಟ್ವೆಂಟಿಯಲ್ಲಿ 98 ವಿಕೆಟನ್ನು ಗಳಿಸಿರುವ ಪಾಕಿಸ್ತಾನದ ಶಾಹಿದ್ ಅಫ್ರಿದಿಯ ಹೆಸರಿನಲ್ಲಿ ಗರಿಷ್ಠ ವಿಕೆಟ್ ಕಿತ್ತ ದಾಖಲೆ ಇದೆ.