9 ದಿನ, 5 ಸೇತುವೆ ಪತನ: ನಿತೀಶ್ ಕುಮಾರ್ ರಿಗೆ ಟಾಂಗು ಕೊಟ್ಟ ತೇಜಸ್ವಿ ಯಾದವ್

0
239

ಸನ್ಮಾರ್ಗ ವಾರ್ತೆ

ಪಟ್ನಾ , ಜೂ. 29: ಕಳಪೆ ಕಾಮಗಾರಿಯಿಂದ ಬಿಹಾರದಲ್ಲಿ ಒಂಬತ್ತು ದಿನಗಳೊಳಗೆ ಐದು ಸೇತುವೆಗಳು ಬಿದ್ದು ಹೋಗಿವೆ ಎಂದ ಆರ್‍ಜೆಡಿ ನಾಯಕ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.

ಇದಕ್ಕಾಗಿ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ ರನ್ನು ಕಟುವಾಗಿ ಟೀಕಿಸಿದ್ದು, ಭೂತಾಹಿ ಸೇತುವೆ ಕುಸಿದ ಚಿತ್ರವನ್ನು ಕೂಡ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೇತುವೆ ಕುಸಿದದ್ದು ಹೇಗೆ ಅದಕ್ಕೆ ಕಾರಣ ಏನು ನೀವು ಪತ್ತೆ ಮಾಡಿದಿರಾ? ಇಲ್ಲದಿದ್ದರೆ ಯಾಕೆ ಮಾಡಿಲ್ಲ? ನಾವು ಅದನ್ನು ಪತ್ತೆ ಹಚ್ಚಬೇಕೇ? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದು ಸೇತುವೆಯ ಕಂಭಗಳು ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.

ಮೂರು ಕೋಟಿ ರೂಪಾಯಿ ವ್ಯಯಿಸಿ ಭೂತಾಹಿ ನದಿಗೆ ವರ್ಷಗಟ್ಟಲೆ ಶ್ರಮವಹಿಸಿ ಸೇತುವೆ ನಿರ್ಮಿಸಲಾಗಿತ್ತು. ಈ ಸಲ ಕೊಚ್ಚಿ ಹೋಗುತ್ತಿರುವ ಐದನೇ ಸೇತುವೆ ಎಂದು ಬುಧವಾರ ಕಿಶನ್ ಗಂಜ್‍ನ 13 ವರ್ಷ ಹಳೆಯ ಸೇತುವೆಯ ಒಂದು ಭಾಗ ಕುಸಿದಿತ್ತು. ಆದುದರಿಂದ ಆ ಕಡೆಯ 40,000 ಸಾವಿರ ಜನರು ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿದ್ದಾರೆ.

2011ರಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 25 ಲಕ್ಷ ರೂಪಾಯಿಯಲ್ಲಿ ಕಟ್ಟಿದ 70 ಮೀಟರ್ ಉದ್ದ 12 ಮೀಟರ್ ಅಗಲದ ಸೇತುವೆ ಕೂಡ ಮಳೆಯ ಪೆಟ್ಟು ಸಹಿಸಲಾಗದೆ ಕುಸಿದು ಬಿತ್ತು. ಜೂನ್ 23ಕ್ಕೆ ಪಶ್ಚಿಮ ಚಂಪಾರಣ್‍ನಲ್ಲಿ ಪ್ರಧಾನಿ ರಾಂ ಸಡಕ್ ಯೋಜನೆಯಲ್ಲಿ ಕಟ್ಟಿದ ಸೇತುವೆಯ ಒಂದು ಭಾಗ ಕುಸಿದು ಬಿದ್ದಿತ್ತು. ಜೂನ್ 22ಕ್ಕೆ ಸಿವಾನ್ ಜಿಲ್ಲೆಯಲ್ಲಿ ಮಹಾರಾಗಂಜ್ ಬ್ಲಕ್‍ನಲ್ಲಿ ಗಂಡಕ್ ನದಿಯ ಒಂದು ಶಾಖಾ ನದಿಗೆ ಕಟ್ಟಿದ ಸಣ್ಣ ಸೇತುವೆ ಕೂಡ ನೀರಿನ ಹರಿವಿನಲ್ಲಿ ಕೊಚ್ಚಿ ಹೋಗಿದೆ.