ಸನ್ಮಾರ್ಗ ವಾರ್ತೆ
ಜೆರುಸಲೇಮ್,ಆ.17: ಅಮೆರಿಕ ಕಾಂಗ್ರೆಸ್ ಸದಸ್ಯರಾದ ಇಬ್ಬರು ಮಹಿಳೆಯರಾದ ಇಲ್ಹಾನ್ ಉಮರ್ ಮತ್ತು ರಾಷಿದ ತಲೈಬಾರಿಗೆ ಇಸ್ರೇಲ್ ಪ್ರವೇಶಿಸದಂತೆ ಅಲ್ಲಿನ ಸರಕಾರ ನಿಷೇಧ ಹೇರಿದೆ. ಇಸ್ರೇಲನ್ನು ಬಹಿಷ್ಕರಿಸುವವರ ಬೆಂಬಲಿಗರು ಎಂದು ಇದಕ್ಕೆ ಇಸ್ರೇಲ್ ಕಾರಣವನ್ನು ಕೊಟ್ಟಿದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಬ್ಬರಲ್ಲಿಯೂ ಇಸ್ರೇಲ್ಗೆ ದ್ರೋಹವೆಸಗುವುದು ಬಿಟ್ಟು ಬೇರೇನಿಲ್ಲ. ತಲೈಬಾ ಮತ್ತು ಇಲ್ಹಾನ್ ಇಬ್ಬರು ಫೆಲಸ್ತೀನ್ ವಂಶಜರು ಎಂದು ಹೇಳಿದ್ದಾರೆ.
ತನ್ನ ಇಬ್ಬರು ಮಹಿಳಾ ಸದಸ್ಯರ ವಿರುದ್ಧ ಇಸ್ರೇಲ್ ನಿಷೇಧ ಹೇರಿರುವುದನ್ನು ಮರುಪರಿಶೀಲಿಸಬೇಕೆಂದು ಡೆಮಾಕ್ರೆಟಿಕ್ ಪಾರ್ಟಿಯ ಹಿರಿಯ ನಾಯಕರು ರಂಗಪ್ರವೇಶಿಸಿದ್ದಾರೆ. ಟ್ರಂಪ್ರ ಕಟು ಟೀಕಾಕಾರರಾಗಿರುವ ಇಬ್ಬರಿಗೂ ಟ್ರಂಪ್ ನಿರ್ದೇಶನದ ಮೇರೆಗೆ ಇಸ್ರೇಲ್ ಪ್ರವೇಶ ನಿಷೇಧ ಹೇರಲಾಗಿದೆ ಎನ್ನಲಾಗುತ್ತಿದೆ.












