ಸಾಯುವ ಕೊನೆಯ ಕ್ಷಣದ ದೃಶ್ಯಗಳು ಎರಡು ವರ್ಷಗಳ ನಂತರ ಪತ್ತೆ- ವೀಡಿಯೊ

0
742

ಸನ್ಮಾರ್ಗ ವಾರ್ತೆ

ಫ್ಲಾರಿಡಾ,ಆ. 22: ಫೋಸ್ಟರ್ ಜಲಪಾತದ ನೀರಿನ ಹರಿವಿನಲ್ಲಿ ಕೊಚ್ಚಿ ಹೋದ ಯುವಕನ ಕೊನೆ ಕ್ಷಣದ ದೃಶ್ಯಗಳಿರುವ ಪ್ರೋ ಕ್ಯಾಮ್ ಎರಡು ವರ್ಷದ ಬಳಿಕ ಅದೇ ಸ್ಥಳಕ್ಕೆ ಸಂದರ್ಶಿಸಲು ಬಂದ ಯುಟ್ಯೂಬರ್‌ಗೆ ನೀರಿನಡಿಯಲ್ಲಿ ಸಿಕ್ಕಿದೆ. 2017ರಲ್ಲಿ ಫ್ಲಾರಿಡೊದ ಫಾಸ್ಟರ್ ನೀರಿನ ಹರಿವಿಗೆ ಸಿಲುಕಿ ಪ್ರಸಿದ್ಧ ಯುಟ್ಯೂಬರ್ ರಿಚರ್ಡ್ ರಾಗ್ಲ್ಯಾಂಡ್ ಎಂಬ ಇಪ್ಪತ್ತಮೂರು ವರ್ಷದ ಯುವಕ ಮೃತಪಟ್ಟಿದ್ದರು.

ಟ್ರೆಷರ್ ಹಂಟರ್ ಎಂದು ತನ್ನನ್ನು ಸ್ವಯಂ ಹೇಳಿಕೊಂಡ ಯುಟ್ಯೂಬರ್ ರಿಚಾ ಅಲೋಹ್ ಮತ್ತು ಮುಳುಗು ತಜ್ಞರೊಂದಿಗೆ ನೀರಿನೊಳಗಿರುವ ವಸ್ತುಗಳನ್ನು ಹುಡುಕಿ ತೆಗೆಯುತ್ತಿದ್ದರು. ತನ್ನ ಇಪ್ಪತ್ತಮೂರನೆ ಹುಟ್ಟುಹಬ್ಬಕ್ಕೆ ಮೊದಲು ರಿಚರ್ಡ್ ಜಲಪಾತದಲ್ಲಿ ಮುಳುಗಿ ಮೃತಪಟ್ಟಿದ್ದರು. ಎರಡು ವರ್ಷ ನೀರಿನಡಿಯಲ್ಲಿದ್ದರೂ ಮೆಮರಿ ಕಾರ್ಡಿಗೆ ಹಾನಿಯಾಗಿಲ್ಲ.