ತ್ರಿವಳಿ ತಲಾಕ್: ಸುಪ್ರೀಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಜಮಿಯ್ಯತ್ತುಲ್ ಉಲಮಾ ಏ ಹಿಂದ್

0
469

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 23: ಮುತ್ತಲಾಕ್ ಕಾನೂನು ಸಂವಿಧಾನ ವಿರೋಧಿಯೆಂದು ಘೋಷಿಸಲು ಆಗ್ರಹಿಸಿ ಜಮಿಯ್ಯತ್ತುಲ್ ಉಲಮಾ ಏ ಹಿಂದ್ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ. ಮುತ್ತಲಾಕ್ ಕೊಡುವ ವ್ಯಕ್ತಿಗೆ ಮೂರು ವರ್ಷದವರೆಗೆ ಜೈಲು ಶಿಕ್ಷೆ ನೀಡುವ ಹೊಸ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.ಈ ಹಿಂದೆ ಸಮಸ್ತ ಕೇರಳ ಜಮ್‍ಇಯ್ಯತ್ತುಲ್ ಉಲಮಾ ಮುತ್ತಲಾಕ್ ಕ್ರಿಮಿನಲ್ ಅಪರಾಧಗೊಳಿಸುವುದರ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.

ಅನ್ಯ ಧರ್ಮಗಳ ಮದುವೆ ಮತ್ತು ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಸಿವಿಲ್ ಕಾನೂನಿನ ವ್ಯಾಪ್ತಿಯಲ್ಲಿರುವಾಗ ಒಂದು ಪ್ರತ್ಯೇಕ ಧರ್ಮಕ್ಕೆ ಮಾತ್ರ ಅದು ಕ್ರಿಮಿನಲ್ ಕಾನೂನಿಡಿಗೆ ತರುವುದು ತಾರತಮ್ಯವಾಗಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ. ಧರ್ಮ,ವಂಶ, ಜಾತಿ ಲಿಂಗ ಆಧಾರದಲ್ಲಿ ದೇಶದ ಪ್ರಜೆಗಳ ನಡುವೆ ತಾರತಮ್ಯ ಮಾಡಲಾಗದು ಎಂಬ ಸಂವಿಧಾನ ಹದಿನೈದನೆಯ ಪರಿಚ್ಛೇದದ ಉಲ್ಲಂಘನೆ ಇದು. ಮುತ್ತಲಾಕ್ ಹಲವು ಇಸ್ಲಾಮಿಕ್ ದೇಶಗಳಲ್ಲಿ ಅಸಿಂಧುವಾಗಿದೆ. ಆದರೆ ಇದಕ್ಕೆ ಶಿಕ್ಷೆಯನ್ನು ಎಲ್ಲಿಯೂ ನೀಡಲಾಗಿಲ್ಲ ಎಂದು ಅರ್ಜಿಯಲ್ಲಿ ಜಮ್‍ಇಯ್ಯತ್ತುಲ್ ಉಲಮಾ ಹಿಂದ್ ಬೆಟ್ಟು ಮಾಡಿದೆ.