ಸನ್ಮಾರ್ಗ ವಾರ್ತೆ
ತಮಿಳುನಾಡು,ಆ.22: ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂರನ್ನು ಅಸಹಜ ಕ್ರಮಗಳ ಮೂಲಕ ಸಿಬಿಐ ಬಂಧಿಸಿದ ಬೆನ್ನಿಗೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯ ವಿರುದ್ಧ ತಮಿಳ್ನಾಡಿನ ಜನ ರೊಚ್ಚಿಗೆದ್ದು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಚಿದಂಬರಂರ ಬಂಧನ ರಾಜಕೀಯ ಪ್ರತೀಕಾರವೆಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಬಿಜೆಪಿ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾರನ್ನು ಟೀಕಿಸುವ ತಮಿಳ್ ಸಂದೇಶ ಟ್ವಿಟರ್ನಲ್ಲಿ ಕಾಣಿಸಿಕೊಂಡಿತು.
‘ಚಿದಂಬರಂ ವಿರುದ್ಧ ಸಿಬಿಐ ಕ್ರಮ ರಾಜಕೀಯ ದುರುದ್ದೇಶದ್ದೆಂದು ನನಗೆ ತಿಳಿದಿದೆ. ಚಿದಂಬರಂ ಕಾನೂನು ತಜ್ಞರು. ಈ ಪ್ರಕರಣವನ್ನು ಅವರು ಕಾನೂನಿನ ಮೂಲಕವೇ ಎದುರಿಸುತ್ತಾರೆ ಎಂದು ಚೆನ್ನೈಯ ಡಿಎಂಕೆ ಕಚೇರಿ ಅಣ್ಣಾ ಅರಿವಾಲಯದಲ್ಲಿ ಸ್ಟಾಲಿನ್ ಹೇಳಿದರು.
ವಿಜಯ್ ಮಲ್ಯ, ನೀರವ್ ಮೋದಿಯವರ ಕುರಿತು ಇಲ್ಲದ ಅವಸರ ಸಿಬಿಐಗೆ ಚಿದಂಬರಂರ ಮೇಲಿದೆ ಎಂದು ಡಿಎಂಕೆ ಸಂಸದ ಆರ್.ಎಸ್.ಭಾರತಿ ಹೇಳಿದರು. ಪ್ರತಿಪಕ್ಷ ಪಾರ್ಟಿಯನ್ನು ಹೆದರಿಸಲು ಬಿಜೆಪಿ ಯತ್ನಿಸುತ್ತಿದೆ. ಆರು ರಾಜ್ಯಸಭಾ ಸದಸ್ಯರು ಈಗಾಗಲೇ ಬಿಜೆಪಿಗೆ ಪಕ್ಷಾಂತರ ಹೋಗಿದ್ದಾರೆ.
ಚಿದಂಬರಂರನ್ನು ಬಂಧಿಸುವ ಮೂಲಕ ಹೆಚ್ಚು ಮಂದಿಯನ್ನು ಖರೀದಿಸಲು ಶ್ರಮಿಸುತ್ತಿದ್ದಾರೆ ಎಂದು ಭಾರತಿ ಆರೋಪಿಸಿದರು. ಡಿಎಂಕೆ ನಾಯಕ ಕರುಣಾನಿಧಿಯನ್ನು ಅಂದಿನ ಮುಖ್ಯಮಂತ್ರಿ ಜಯಲಲಿತಾ ಬಂಧಿಸಿದ್ದಕ್ಕೆ ಸಮಾನವಾಗಿ ಚಿದಂಬರಂರನ್ನು ಬಂಧಿಸುವ ನಾಟಕ ನಡೆದಿದೆ. ನಂತರ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಜಯಲಲಿತಾ ಸರಕಾರ ಬಿತ್ತು. ನಾವು ಅಧಿಕಾರಕ್ಕೆ ಬಂದೆವು ಎಂದು ಭಾರತಿ ನೆನಪಿಸಿದರು.
ಚಿಂದಂಬರಂ ಬಂಧನ, ಕಾಶ್ಮೀರ ಸೇರಿದ ಕ್ರಮಗಳಲ್ಲಿ ಮೋದಿ ಸರಕಾರ ಕೈಗೊಂಡ ಜನವಿರೋಧಿ ಕ್ರಮಗಳನ್ನು ಉದ್ಧರಿಸಿ ಬಿಜೆಪಿ ಅಗೈನ್ಸ್ಟ್ ಡೆಮಕ್ರಾಸಿ ಎಂಬ ಹ್ಯಾಶ್ ಟ್ಯಾಗ್ ಇಂಡಿಯನ್ ಟ್ವಿಟರ್ ಟ್ರೆಂಡ್ಗಳ ಪ್ರಥಮ ಸ್ಥಾನಕ್ಕೆ ತಲುಪಿದೆ. ಮೋದಿಯನ್ನು ಹಿಟ್ಲರ್ರೊಂದಿಗೂ ಡ್ರಾಕುಲಾದೊಂದಿಗು ಹೊಲಿಸಿದ ಟ್ವೀಟ್ಗಳು ಹೆಚ್ಚು ಇವೆ.












