ಕೇರಳ: ಸೇನಾ ಸೇರ್ಪಡೆ ರ‌್ಯಾಲಿ ಸೆಪ್ಟಂಬರ್‌ನಲ್ಲಿ

0
460

ಸನ್ಮಾರ್ಗ ವಾರ್ತೆ

ಕೇರಳ,ಆ.26: ಕೇರಳದಲ್ಲಿ ಸೇನಾ ರಿಕ್ರ್ಯೂಟ್‌ಮೆಂಟ್ ರ‌್ಯಾಲಿಯು ಸೆಪ್ಟಂಬರ್ 17 ರಿಂದ 28 ರವರೆಗೆ ನಡೆಯಲಿದೆ. ಈ ಹಿಂದೆ ಆಗಸ್ಟ್ 28ರಿಂದ ಸೆಪ್ಟಂಬರ್ 8ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಕೇರಳದ ಪ್ರವಾಹ ಪರಿಸ್ಥಿತಿ, ಭೂಕುಸಿತ ಇತ್ಯಾದಿ ಕಾರಣಗಳಿಂದಾಗಿ ತೃಶೂರಿನಲ್ಲಿ ನಡೆಯಬೇಕಾಗಿದ್ದ ರ‌್ಯಾಲಿಯನ್ನು ಸೆಪ್ಟಂಬರ್ ತಿಂಗಳಿಗೆ ಮುಂದೂಡಲಾಗಿದೆ.

ರ‌್ಯಾಲಿಯಲ್ಲಿ ರಿಕ್ರ್ಯೂಟ್‍ಮೆಂಟ್ ನಡೆಸುವ ಅಧಿಕಾರಿಗಳು ಉತ್ತರ ಜಿಲ್ಲೆಗಳಿಂದ ಬರುತ್ತಾರೆ. ಅಲ್ಲಿ ಜಲ ಪ್ರಳಯ?ದಿಂದಾಗಿ ನಾಶನಷ್ಟ ಸಂಭವಿಸಿದ್ದು ಅಧಿಕಾರಿಗಳಿಗೆ ಬಂದು ಸೇರಲು ಹಾಗೂ ಸಿದ್ಧತೆ ನಡೆಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಆರ್ಮಿ ರಿಕ್ರ್ಯೂಟ್‌ಮೆಂಟ್ ರ‌್ಯಾಲಿ ಮುಂದೂಡಲಾಗಿದೆ.