ನಟ ಸಂಜಯ್ ದತ್ ಆರ್‌ಎಸ್‌ಪಿ ಸೇರ್ಪಡೆ

0
674

ಸನ್ಮಾರ್ಗ ವಾರ್ತೆ

ಮುಂಬೈ,ಆ. 26: ಬಾಲಿವುಡ್ ನಟ ಸಂಜಯ್ ದತ್ ಪುನಃ ರಾಜಕೀಯ ಪ್ರವೇಶಿಸಲಿದ್ದು ಸೆಪ್ಟಂಬರ್ 25ರಂದು ರಾಷ್ಟ್ರೀಯ ಸಮಾಜ್ ಪಕ್ಷಕ್ಕೆ(ಆರ್‌ಎಸ್‌ಪಿ) ಸೇರ್ಪಡೆಯಾಗಲಿದ್ದಾರೆ. ಪಾರ್ಟಿ ಸ್ಥಾಪಕ ಹಾಗೂ ಕೇಂದ್ರ ಸಚಿವ ಮಹಾದೇವ್ ಜನಕ್ ಈ ವಿಷಯವನ್ನು ತಿಳಿಸಿದ್ದು ಅವರು ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾರೆ.

ಆರ್‌ಎಸ್‌ಪಿ ಬೆಳವಣಿಗೆಯನ್ನು ಗಮನದಲ್ಲಿಟ್ಟು ಸಿನೆಮಾ ಕ್ಷೇತ್ರದ ಪ್ರಮುಖರನ್ನು ಪಾರ್ಟಿಗೆ ಸ್ವಾಗತಿಸಲಾಗುವುದು. ಎಲ್ಲ ಕ್ಷೇತ್ರದವರು ಒಳಗೊಂಡ ಪಾರ್ಟಿ ಆರ್‌ಎಸ್‌ಪಿಯಾಗಿದೆ. ಇದರ ಅಂಗವಾಗಿ ಸೆಪ್ಟಂಬರ್ 25ಕ್ಕೆ ಸಂಜಯ್ ದತ್ ಅಧಿಕೃತವಾಗಿ ಪಕ್ಷ ಸೇರುತ್ತಾರೆ ಎಂದು ಜನಕ್ ಹೇಳಿದರು. ಈ ಸಂದರ್ಭದಲ್ಲಿ ಸಂಜಯ್‍ದತ್ ಆರ್‌ಎಸ್‌ಪಿಗೆ ಶುಭಾಶಯ ಕೋರುವ ವೀಡಿಯೊವನ್ನು ಜನಕ್ ಬಿಡುಗಡೆಗೊಳಿಸಿದರು. ಮಹಾರಾಷ್ಟ್ರದ ಬಂಗಲ್ ಸಮುದಾಯವನ್ನು ಪ್ರತಿನಿಧಿಸಿ ಆರ್‌ಎಸ್‌ಪಿಯನ್ನು ಸ್ಥಾಪಿಸಲಾಗಿದ್ದು 2014ರ ಲೋಕಸಭಾ ಚುನಾವಣೆಯಲ್ಲಿ ಪಾರ್ಟಿ ಎನ್‍ಡಿಎಯ ಸಖ್ಯಪಕ್ಷವಾಯಿತು.