ಸನ್ಮಾರ್ಗ ವಾರ್ತೆ-
ಮುಂಬೈ; ಆ.26 ರೈಲ್ವೆ ನಿಲ್ದಾಣದಲ್ಲಿ ಬಿಕ್ಷುಕಿ ಮಹಿಳೆಯೊಬ್ಬರು ಹಾಡಿದ ಹಾಡು ವೈರಲ್ ಆಗಿರುವುದುನಿಮಗೆ ಗೊತ್ತಿರಬಹುದು. ಇದೀಗ ಆಕೆಯ ಮಗಳೂ ಆಕೆಗೆ ಸಿಕ್ಕಿದ್ದಾರೆ. 10 ವರ್ಷದ ಬಳಿಕ ರಾನು ಮೊಂಡಲ್ ಅವರನ್ನು ಮಗಳು ಭೇಟಿಯಾಗಿದ್ದಾಳೆ.
ರಾನು ಅವರು ನ್ಯೂರೋಲಾಜಿಕಲ್ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ದರಿಂದ ಕಳೆದ 10 ವರ್ಷಗಳ ಹಿಂದೆ ಮಗಳಿಂದ ದೂರ ಆಗಿ, ಒಂಟಿಯಾಗಿ ಬದುಕುತ್ತಿದ್ದರು. ರೈಲ್ವೇ ನಿಲ್ದಾಣದಲ್ಲಿ ಹಾಡುತ್ತಾ ಸಿಕ್ಕ ದುಡ್ಡಿನಿಂದ ಜೀವನ ಸಾಗಿಸುತ್ತಿದ್ದ ಅವರು ಈ ಪ್ರಸಿದ್ಧರಾಗಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ “ಏಕ್ ಪ್ಯಾರ್ ಕಾ ನಗ್ಮಾ ಹೇ” ಹಿಂದಿ ಹಾಡು ಹಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಅವರಿಗೆ ಬಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ಹಾಡಲು ಆಫರ್ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮಗಳು ತಾಯಿಯ ವೀಡಿಯೊ ನೋಡಿ ಅವರ ಮನೆಗೆ ಬಂದು ಭೇಟಿಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿದ ರಾನು ಅವರು ನನಗೆ ಖುಷಿಯಾಗಿದೆ, ನನಗೆ ಹೊಸ ಬದುಕು ದೊರಕಿದೆ. ಹೀಗಾಗಿ ಇದನ್ನು ನಾನು ಹಾಳು ಮಾಡಿಕೊಳ್ಳುವುದಿಲ್ಲ. ಸಿಕ್ಕ ಅವಕಾಶವನ್ನು ದೂರ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಕಳೆದ ತಿಂಗಳು ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ಓರ್ವ ಬಿಕ್ಷುಕಿ ಹಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು. 1972ರಲ್ಲಿ ಬಿಡುಗಡೆಯಾದ ‘ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಮೊಂಡಲ್ ಎಂಬವರು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಮೊಂಡಲ್ ಅವರ ಈ ವಿಡಿಯೋವನ್ನು ‘ಬಾರ್ಪೆಟಾ ಟೌನ್ ದಿ ಪ್ಲೇಸ್ ಆಫ್ ಪೀಸ್’ ಪೇಜ್ ಫೇಸ್ಬುಕ್ನಲ್ಲಿ ಹಂಚಿಕೊಂಡಿತ್ತು. ಇದು ಜನಪ್ರಿಯ ಆಗುತ್ತಿದ್ದಂತೆಯೇ, ಮೊಂಡಲ್ ಅವರಿಗೆ ಮುಂಬೈನಲ್ಲಿ ನಡೆಯುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಕ್ಕಿತ್ತು.
ಆ ಬಳಿಕ ರಾನು ಅವರು ರಿಯಾಲಿಟಿ ಶೋಗೆ ಪ್ರವೇಶಿಸಿದ್ದರು. ಬಳಿಕ ಖ್ಯಾತ ಗಾಯಕ ಹಿಮೇಶ್ ರೇಶಮಿಯ ಅವರು ತಮ್ಮ ಹೊಸ ಸಿನಿಮಾದಲ್ಲಿ ಹಾಡಲು ರಾನು ಮೊಂಡಲ್ ಅವರಿಗೆ ಅವಕಾಶ ನೀಡಿದ್ದಾರೆ ಎಂದು ವರದಿಗಳು ಬಂದುವು. ಈ ವಿಷಯವನ್ನು ಸ್ವತಃ ಹಿಮೇಶ್ ರೇಶ್ಮಿಯಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳಿಗೆ ತಿಳಿಸಿದರು. ವಿಡಿಯೋದಲ್ಲಿ ರಾನು ಮೊಂಡಲ್ ಅವರು ಹಾಡು ರೆಕಾರ್ಡ್ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.
ವರದಿಗಳ ಪ್ರಕಾರ ಹಿಮೇಶ್ ಅವರು ತಮ್ಮ ಮುಂಬರುವ ಚಿತ್ರದಲ್ಲಿ ಹಾಡು ಹಾಡಲು ಮೊಂಡಲ್ ಗೆ ಅವಕಾಶ ನೀಡಿದ್ದಾರೆ. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಹಾಡಿಗೆ ಧ್ವನಿ ನೀಡಿದ್ದಾರೆ. ಒಟ್ಟಿನಲ್ಲಿ ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಿದ್ದ ಮಹಿಳೆಯೋರ್ವರು ಈಗ ದೇಶದ ಸೆಲೆಬ್ರಿಟಿಯಾಗಿ ಮಾರ್ಪಟ್ಟಿದ್ದಾರೆ.
The lady Ranu Mondal singing Lata ji's song outside Kolkata railway station. Today she recorded her first song with Himesh sir for his film #HappyHardyAndHeer pic.twitter.com/3mqNUkXDhM
— Team Himesh (@TeamHimesh) August 22, 2019












