ಕಾಶ್ಮೀರ: ಗೃಹ ಸಚಿವಾಲಯದಿಂದ ಉನ್ನತ ಮಟ್ಟದ ಚರ್ಚೆ

0
451

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ.27: ಜಮ್ಮು ಕಾಶ್ಮೀರ ಪುನರ್‌ರಚನೆ ಜಾರಿಗೆ ತರುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವಾಲಯ ಉನ್ನತ ಮಟ್ಟದ ಚರ್ಚೆಗೆ ಆಹ್ವಾನಿಸಿದೆ. ಗೃಹಕಾರ್ಯದರ್ಶಿಯ ನೇತೃತ್ವದಲ್ಲಿ ನಾರ್ತ್ ಬ್ಲಾಕ್‍ನಲ್ಲಿ ಕಾಶ್ಮೀರವನ್ನು ಎರಡನ್ನಾಗಿ ವಿಭಜಿಸಿ ಕೇಂದ್ರಾಡಳಿತ ಪ್ರದೇಶವಾಗಿ ಪುನರ್ ರೂಪಿಸುವ ಕಾನೂನು ಜಾರಿಗೊಳಿಸುವುದಕ್ಕೆ ಸಂಬಂಧಿಸಿ ಚರ್ಚೆ ನಡೆಯಲಿದೆ. ಇದೇ ವೇಳೆ, ಜಮ್ಮು-ಕಾಶ್ಮೀರದ ವಿಧಿ 370 ರದ್ದು ಪಡಿಸಿದ ನಂತರ ಕೇಂದ್ರ ಸರಕಾರ ಹೇರಿದ ನಿಯಂತ್ರಣಗಳು ಅಲ್ಲಿ ಈಗಲೂ ಮುಂದುವರಿಯುತ್ತಿದೆ.

ಕೇಂದ್ರ ಸರಕಾರದ ನಿರ್ಧಾರದ ಬಗ್ಗೆ ಕಾಶ್ಮೀರಿ ನಾಯಕರಾದ ಫೈಝಲ್ ಶಾ, ಶೆಹ್ಲಾ ರಾಷಿದ್ ಸಹಿತ ಏಳು ಮಂದಿ ತಂಡ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರಕಾರ ತನ್ನ ಕ್ರಮವನ್ನು ಪುನರ್ ಪರಿಶೀಲಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ಬುಧವಾರ ಇವರ ಅರ್ಜಿ ಪರಿಗಣನೆಗೆ ಬರಲಿದೆ. ನಿಯಂತ್ರಣಗಳು ಮುಂದುವರಿದು ಮಂದಗತಿಯಲ್ಲಾಗಿರುವ ಕಾಶ್ಮೀರದ ಪ್ರವಾಸಿ ಕ್ಷೇತ್ರವನ್ನು ಉತ್ತೇಜಿಸುವ ಯೋಜನೆಗಳನ್ನು ರೂಪಿಸುವುದಕ್ಕಾಗಿ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ತಂಡ ಮುಂದಿನ ತಿಂಗಳು ಕಾಶ್ಮೀರಕ್ಕೆ ಮತ್ತು ಲಡಾಕ್‍ಗೆ ಭೇಟಿ ನೀಡಲಿದೆ.