ಹೊಸದಿಲ್ಲಿ,ಆ.27: ವಾಹನ ಮಾರಾಟದಲ್ಲಿ ಹಿನ್ನಡೆಯನ್ನು ಎದುರಿಸುತ್ತಿರುವ ಮಾರುತಿ ಕಂಪೆನಿ 3000 ಗುತ್ತೆ ನೌಕರರನ್ನು ಕೆಲಸದಿಂದ ತೆಗೆದು ಹಾಕಲು ಹೊರಟಿದೆ. ಕಾರ್ಮಿಕರ ಗುತ್ತೆಯನ್ನು ನವೀಕರಿಸದಿರಲು ಕಂಪೆನಿ ನಿರ್ಧರಿಸಿದೆ ಮಾರುತಿ ಸುಝುಕಿ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದರು.
ಕಾರುಗಳ ಬೆಲೆ, ಸುರಕ್ಷೆಯ ಮಾನದಂಡಗಳು, ಹೆಚ್ಚಿದ ತೆರಿಗೆಯ ಕಾರಣದಿಂದಾಗಿ ತಯಾರಿಕೆಯ ವೆಚ್ಚ ಸಹಿಸಲು ಆಗದ ಪರಿಸ್ಥಿತಿ ಕಂಪೆನಿಯದ್ದಾಗಿದೆ ಎಂದು ಭಾರ್ಗವ ಶೇರು ಹೋಲ್ಡರ್‌ಗಳಿಗೆ ತಿಳಿಸಿದರು. ಭಾರತದ ವಾಹನ ಮಾರುಕಟ್ಟೆ ಭಾರೀ ಹಿನ್ನಡೆಗೊಳಗಾದ ನಂತರ ವಾಹನ ತಯಾರಕರು ಕೆಲಸದಿಂದ ಜನರನ್ನು ತೆಗೆದು ಹಾಕುತ್ತಿದ್ದಾರೆ. ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸುತ್ತಿದ್ದಾರೆ. ಕಂಫ್ರಸ್ಡ್ ನ್ಯಾಚುರಲ್ ಗ್ಯಾಸ್(ಡಿಎನ್‍ಜಿ) ಹೈಬ್ರಿಡ್ ಕಾರುಗಳನ್ನು ನಿರ್ಮಿಸಲು ಕಂಪೆನಿಗಳು ಹೊರಟಿವೆ. ಈ ವರ್ಷ ಸಿಎನ್‍ಜಿ ವಾಹನ ತಯಾರಿಯಲ್ಲಿ ಶೇ.50ರಷ್ಟು ಹೆಚ್ಚಳ ಮಾಡುವುದಾಗಿ ಭಾರ್ಗವ ಹೇಳಿದರು.












