ಏಕರೂಪ ನೀತಿ ಸಂಹಿತೆ: ಇಂದು ಅರ್ಜಿ ವಿಚಾರಣೆ

0
466

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.27:ದೇಶದಲ್ಲಿ ಲಿಂಗ ನ್ಯಾಯ ಮತ್ತು ಸ್ತ್ರೀ ಸಮಾನತೆ ದೃಢಪಡಿಸುವುದಕ್ಕಾಗಿ ಏಕರೂಪ ನೀತಿ ಸಂಹಿತೆಯ ಕರಡು ತಯಾರಿಸಲು ಆಯೋಗ ನೇಮಿಸಬೇಕೆಂದು ಆಗ್ರಹಿಸಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ದಿಲ್ಲಿ ಹೈಕೋರ್ಟು ಪರಿಗಣಿಸಲಿದೆ. ವಕೀಲ ಅಭಿನವ್ ಬೆರಿ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳೊಳಗೆ ಏಕ ರೂಪ ನಾಗರಿಕ ಸಂಹಿತೆಯ ಕರಡು ತಯಾರಿಸಲು ಜ್ಯೂಡಿಶಿಯಲ್ ಆಯೋಗಕ್ಕೆ ಉನ್ನತ ಮಟ್ಟದ ತಜ್ಞ ಸಮಿತಿಯನ್ನು ನೇಮಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಜಸ್ಟಿಸ್ ಡಿಎನ್ ಪಟೇಲ್, ಸಿ. ಹರಿಶಂಕರ್ ಪೀಠ ಅರ್ಜಿಯನ್ನು ವಿಚಾರಣೆಗೆತ್ತಿಕೊಳ್ಳಲಿದೆ.

ಏಕ ರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಕೇಂದ್ರ ಸರಕಾರಕ್ಕೆ ಕೋರ್ಟು ಸೂಚಿಸಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಈ ಹಿಂದೆ ಸಲ್ಲಿಸಿದ ಅರ್ಜಿಯು ಕೋರ್ಟಿನ ಮುಂದಿದೆ. ವೈಯಕ್ತಿಕ ಕಾನೂನು ರದ್ದು ಪಡಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ. ಇದರ ವಿರುದ್ಧ ಮುಸ್ಲಿಂ ಪರ್ಸನಲ್ ಲಾ ಬೋರ್ಡು ಸಲ್ಲಿಸಿದ ಅರ್ಜಿ ಕೂಡ ಹೈಕೋರ್ಟಿನ ಪರಿಗಣನೆಯಲ್ಲಿದೆ.