ಜಮ್ಮು: 5 ಜಿಲ್ಲೆಗಳಲ್ಲಿ ಮೊಬೈಲ್ ಸೇವೆ ಪುನರಾರಂಭ

0
389

ಸನ್ಮಾರ್ಗ ವಾರ್ತೆ

ಶ್ರೀನಗರ, ಆ.29: ಜಮ್ಮುವಿನ ಐದು ಜಿಲ್ಲೆಗಳಲ್ಲಿ ಮೊಬೈಲ್ ಸೇವೆಯನ್ನು ಪುನರಾರಂಭಿಸಲಾಗಿದೆ. ದೋದ, ಕಿಶ್ತವಾರ್, ರಂಭನ್, ರಜೌರಿ, ಪೂಂಚ್‍ಗಳಲ್ಲಿ ಮೊಬೈಲ್ ಸಂಪರ್ಕವನ್ನು ಮರುಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಹಿಂದೆಯೇ ಜಮ್ಮು, ಕತ್ವ, ಸಾಂಬ, ಉದಂಪುರ, ರೆಸಿ ಮೊದಲಾದ ಜಿಲ್ಲೆಗಳಲ್ಲಿ ಇಂಟರ್ನೆಟ್ ಲಭ್ಯಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಆರ್ಟಿಕಲ್ 370 ರದ್ದುಪಡಿಸುವುದಕ್ಕಿಂತ ಮೊದಲು ಆಗಸ್ಟ್ ಐದಕ್ಕೆ ಕಾಶ್ಮೀರದ ಇಂಟರ್ನೆಟ್ ಸೇವೆಗಳನ್ನು ರದ್ದುಪಡಿಸಲಾಗಿತ್ತು. ನಂತರ ಇದನ್ನು ಆಂಶಿಕವಾಗಿ ಮರುಸ್ಥಾಪಿಸಲಾಗಿದ್ದರೂ ಹಲವೆಡೆ ಮೊಬೈಲ್ ಸಂಪರ್ಕ ಲಭಿಸಿರಲಿಲ್ಲ.

ಇದೇ ವೇಳೆ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಗುರುವಾರ ಕಾಶ್ಮೀರಕ್ಕೆ ಆಗಮಿಸಲಿದ್ದಾರೆ. ಸಿಪಿಎಂ ನಾಯಕ ಯೂಸುಫ್ ತರಿಗಾಮಿಯವರನ್ನು ಭೇಟಿಯಾಗಲು ಕಾಶ್ಮೀರಕ್ಕೆ ತೆರಳಲು ಸುಪ್ರೀಂಕೋರ್ಟು ಅವರಿಗೆ ಅನುಮತಿ ನೀಡಿದೆ.