ಸನ್ಮಾರ್ಗ ವಾರ್ತೆ
ಕೋಯಮತ್ತೂರು,ಆ.29: ತಮಿಳುನಾಡಿನಲ್ಲಿ ಭಯೋತ್ಪಾದಕರ ದಾಳಿ ಬೆದರಿಕೆಯ ನಂತರ ಕೋಯಮತ್ತೂರಿನಲ್ಲಿ ವ್ಯಾಪಕ ಎನ್‍ಐಎ ದಾಳಿ ನಡೆದಿದೆ. ಭಯೋತ್ಪಾದಕರೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆನ್ನಲಾದ ಶಂಕಿತರ ಮನೆಗೆ ಎನ್‍ಐಎ ದಾಳಿ ಮಾಡಿದ್ದು ಕೋಯಮತ್ತೂರಿನಲ್ಲಿ ಐದು ಕಡೆಯಿಂದ ಮೊಬೈಲ್ ಫೋನ್, ಲ್ಯಾಪ್‍ಟ್ಯಾಪ್, ಸಿಮ್ ಕಾರ್ಡುಗಳು, ಪೆನ್‍ಡ್ರೈವ್‍ಗಳನ್ನು ವಶಪಡಿಸಿದ್ದಾರೆ.
ಶ್ರೀಲಂಕಾದ ಮಸೀದಿಯಲ್ಲಿ ನಡೆದ ಐಎಸ್ ಭಯೋತ್ಪಾದನಾ ದಾಳಿಗೆ ಸಂಬಂಧಿಸಿ ತಮಿಳುನಾಡಿನಲ್ಲಿ ಬಂಧಿಸಲಾದ ಮುಹಮ್ಮದ್ ಅಝರುದ್ದೀನ್‍ನೊಂದಿಗೆ ಸಂಬಂಧ ಇರಿಸಿಕೊಂಡಿದ್ದವರ ಮನೆಗಳಿಗೆ ಎನ್‍ಐಎ ದಾಳಿ ಮಾಡಿದೆ. ಜೂನ್‍ನಲ್ಲಿ ಮುಹಮ್ಮದ್ ಅಝರುದ್ದೀನ್‌ನನ್ನು ಬಂಧಿಸಲಾಗಿತ್ತು. ಅಂದು ಈತನಿಗೆ ಸಂಬಂಧವಿರುವ ವ್ಯಕ್ತಿಗಳ ವಸತಿ, ಕಚೇರಿಗಳಲ್ಲಿ ಎನ್‍ಐಎ ದಾಳಿ ನಡೆಸಿದೆ.












