ಭಾರತದ ಮೇಲೆ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು- ವೆಂಕಯ್ಯ ನಾಯಿಡು

0
447

ಸನ್ಮಾರ್ಗ ವಾರ್ತೆ

ವಿಶಾಖಪಟ್ಟಣ,ಆ.29: ಭಾರತದ ಮೇಲೆ ಯಾರಾದರೂ ದಾಳಿ ಮಾಡಿದರೆ ಮರೆಯಲಾಗದ ರೀತಿಯಲ್ಲಿ ಪ್ರತ್ಯುತ್ತರ ನೀಡಲಾಗುವುದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯಿಡು ಹೇಳಿದ್ದಾರೆ. ಪಾಕಿಸ್ತಾನವನ್ನು ಪರೋಕ್ಷವಾಗಿ ಸೂಚಿಸಿ ನಾಯ್ಡು ಹೀಗೆ ಹೇಳಿದ್ದು, “ಯಾಕೆ ನಾವು ಆಯುಧಗಳನ್ನು ಕಲೆಹಾಕುತ್ತೇವೆ. ರಕ್ಷಣಾ ಸಂಶೋಧನಾಭಿವೃದ್ಧಿ ಸಂಘಟನೆ(ಡಿಆರ್‌ಡಿಓ)ಇರುವುದು ಯಾಕೆ, ನೌಕಾ,ವಾಯು, ಭೂಸೇನೆಗಳು ಇರುವುದು ಯಾಕೆ; ಇವೆಲ್ಲ ಇತರರು ನಮ್ಮನ್ನು ಆಕ್ರಮಿಸಿದರೆ ತಿರುಗೇಟು ನೀಡುವುದಕ್ಕಾಗಿಯೇ ಇವೆ ಎಂದು ನಾಯ್ಡು ಹೇಳಿದರು.

ನಾವು ಅತ್ತ ಹೋಗಿ ಯಾರನ್ನೂ ಆಕ್ರಮಿಸುವುದಿಲ್ಲ. ಆದರೆ, ನಮ್ಮ ವಿರುದ್ಧ ದಾಳಿ ಮಾಡಿದರೆ ತಕ್ಕ ಉತ್ತರ ನೀಡುತ್ತೇವೆ. ಎಂದು ಅವರು ಹೇಳಿದರು. ಈ ಹಿಂದೆ, ಭಾರತದೊಂದಿಗೆ ಅಕ್ಟೋಬರ್ ಅಥವಾ ನವೆಂಬರ್‍‌ನಲ್ಲಿ ಯುದ್ಧ ನಡೆಯಬಹುದು ಎಂದು ಪಾಕಿಸ್ತಾನದ ಸಚಿವ ಶೇಖ್ ರಾಷಿದ್ ಅಹ್ಮದ್ ಹೇಳಿದ್ದರು.