ಸನ್ಮಾರ್ಗ ವಾರ್ತೆ
ಜಮ್ಮು,ಆ.29: ಫೇಸ್‍ಬುಕ್‌ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ಜಮ್ಮು-ಕಾಶ್ಮೀರದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಝಹೀರ್ ಚೌಧರಿ ಕಲಸ್, ಝಾಕಿರ್ ಶಾಬುಕಾರಿ, ಇಮ್ರಾನ್ ಖಾಝಿ, ನಾಸಿಕ್ ಹುಸೈನ್, ಸರ್ದಾರ್ ತಾರಿಕ್ ಖಾನ್ ಬಂಧಿತರು. ಇವರ ವಿರುದ್ಧ ಐಟಿ ಕಾಯ್ದೆಯ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ರಜೌರಿ, ಪೂಂಚ್ ಜಿಲ್ಲೆಗಳ ನಿವಾಸಿಗಳು ಇವರು. ಜಮ್ಮು-ಕಾಶ್ಮೀರದ ಹೊರಗೆ ಕೆಲಸ ಮಾಡುತ್ತಿದ್ದಾರೆ. ಇವರ ಪಾಸ್‍ಪೋರ್ಟ್ ರದ್ದು ಪಡಿಸಲು ಪೊಲೀಸರು ಕ್ರಮ ಜರಗಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕಣ್ಣಿಟ್ಟಿರುವ ರಜೌರಿ ಪೊಲೀಸರು ಇವರ ಪೋಸ್ಟ್‌ಗಳನ್ನು ಗುರುತಿಸಿದರೆಂದು ಪೊಲೀಸ್ ಸುಪರಿಡೆಂಟ್ ಯುಗಲ್ ಮನ್‍ಹಾಸ್ ಹೇಳಿದರು. ಪ್ರಚೋದಕ ಪೋಸ್ಟ್‌ಗಳನ್ನು ಇವರು ನಿರಂತರ ಹಾಕುತ್ತಿದ್ದರು. ಇವುಗಳಲ್ಲಿ ಕೆಲವು ಕಾಶ್ಮೀರದ ಶಾಂತ ವಾತಾವರಣವನ್ನು ಕೆಡವುದಕ್ಕೆ ಕಾರಣವಾಗುವಂತಿದ್ದವು ಎಂದು ಅವರು ಹೇಳಿದ್ದಾರೆ. ಕಳೆದ ವಾರ ಕಾಶ್ಮೀರದಲ್ಲಿ ಇಬ್ಬರನ್ನು ಫೇಸ್‍ಬುಕ್ ಪೋಸ್ಟ್‌ಗಾಗಿ ಬಂಧಿಸಲಾಗಿದೆ.












