ರಾಷ್ಟ್ರಮಟ್ಟದ ಕರಾಟೆ ಸ್ಫರ್ಧೆಯಲ್ಲಿ ಪ್ರಥಮ: ಹಿರಾ ಪ್ರಾಥಮಿಕ ಶಾಲೆಯ ನಫೀಸ ಹಿಬತ್ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

0
1821

ಗೋವಾ: ಪಣಜಿಯಲ್ಲಿ ಆಗಸ್ಟ್ 24, 25 ರಂದು ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಫರ್ದೆಯಲ್ಲಿ ಹಿರಾ ಪ್ರಾಥಮಿಕ ಶಾಲೆ, ಬಬ್ಬುಕಟ್ಟೆಯ ವಿದ್ಯಾರ್ಥಿನಿಯಾದ ನಫೀಸ ಹಿಬತ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಎಪ್ರಿಲ್ 2020ರಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಫರ್ದೆಗೆ ಆಯ್ಕೆಯಾಗಿದ್ದಾರೆ. ಈಕೆ ರಾಷ್ಟ್ರಮಟ್ಟದ ಕರಾಟೆ ತರಬೇತುದಾರರು ಮತ್ತು ತೀರ್ಪುಗಾರರಾದ ಸೆನ್ಸೈ. ಧರ್ಣಪ್ಪ.ಕೆ. ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

ಮಂಗಳೂರು: ಕುದ್ರೋಳಿಯಲ್ಲಿ ಆಗಸ್ಟ್ 19 ರಂದು ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಿರಾ ಪ್ರಾಥಮಿಕ ಶಾಲೆ ಬಬ್ಬುಕಟ್ಟೆಯ ವಿದ್ಯಾರ್ಥಿನಿಯರಾದ ನಫೀಸ ಹಿಬತ್ ‘ಕಟಾ’ ಹಾಗೂ ‘ಕುಮಿಟೆ’ ವಿಭಾಗದಲ್ಲಿ ಪ್ರಥಮ ಸ್ಥಾನ, ಫಸೀಹಾ ‘ಕಟಾ’ ವಿಭಾಗದಲ್ಲಿ ದ್ವಿತೀಯ ಸ್ಥಾನ, ಆಯೇಷ ಶಮ್ರೀನಾ ಹಾಗೂ ಶನುಮ್ ಅವ್ವ ‘ಕಟಾ’ ವಿಭಾಗದಲ್ಲಿ ತೃತೀತ ಸ್ಥಾನವನ್ನು ಪಡೆದಿರುತ್ತಾರೆ. ಇವರು ರಾಷ್ಟ್ರಮಟ್ಟದ ಕರಾಟೆ ತರಬೇತುದಾರರು ಮತ್ತು ತೀರ್ಪುಗಾರರಾದ ಸೆನ್ಸೈ. ಧರ್ಣಪ್ಪ.ಕೆ. ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.