ಸನ್ಮಾರ್ಗ ವಾರ್ತೆ
ಪಾಟ್ನ,ಆ.30: ಬಿಹಾರದ ಸರಕಾರಿ ಕಚೇರಿಗಳಲ್ಲಿ ಜೀನ್ಸ್ ಟೀಶರ್ಟ್ ನಿಷೇಧಿಸಲಾಗಿದೆ. ಕಚೇರಿ ಸಂಸ್ಕೃತಿಗೊಪ್ಪುವ ಬಟ್ಟೆ ಧರಿಸಿ ಕಚೇರಿಗೆ ಬರಬೇಕೆಂದು ರಾಜ್ಯ ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರಕಾರಿ ನಿಯಂತ್ರಣದ ಕಚೇರಿಗಳಲ್ಲಿ (ಸೆಕ್ರಟರಿಯೇಟ್ನಲ್ಲಿ) ಕೆಲವು ನೌಕರರು ಕಚೇರಿ ಸಂಸ್ಕೃತಿಗೆ ಒಪ್ಪದ ಉಡುಪು ಧರಿಸಿ ಬರುವುದು ಸರಕಾರದ ಗಮನಕ್ಕೆ ಬಂದಿದ್ದು ಇದು ಕಚೇರಿಯ ಶಿಷ್ಟಾಚಾರಕ್ಕೆ ಸರಿದೂಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸರಕಾರದ ಪ್ರಧಾನ ಕಾರ್ಯದರ್ಶಿ ಮಾಧವ್ದೇವ್ ಪ್ರಸಾದ್ ವಸ್ತ್ರ ನೀತಿ ಸಹಿತೆಗೆ ಸಂಬಂಧಿಸಿದ ಆದೇಶವನ್ನು ಜಾರಿಗೊಳಿಸಿದ್ದಾರೆ.












