ಜರ್ಮನಿ: ನಿರಾಶ್ರಿತರ ಶಿಬಿರಗಳ ಮೇಲೆ 600ಕ್ಕೂ ಹೆಚ್ಚು ದಾಳಿ!

0
644

ಸನ್ಮಾರ್ಗ ವಾರ್ತೆ

ಬರ್ಲಿನ್: ಈ ವರ್ಷ ಇದುವರೆಗೆ ಜರ್ಮನಿಯಲ್ಲಿ ನಿರಾಶ್ರಿತರ ಮೇಲೆ ಆರು ನೂರಕ್ಕೂ ಹೆಚ್ಚು ಬಾರಿ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. 2019ರ ಮಧ್ಯಭಾಗವಾಗುವಾಗ 609 ದಾಳಿಗಳು ನಿರಾಶ್ರಿತ ಶಿಬಿರಗಳ ಮೇಲೆ ನಡೆಯಿತು. ಇದು ಪೊಲೀಸ್ ದಾಖಲೆಗಳನ್ನು ಆಧರಿಸಿ ಗೃಹ ಇಲಾಖೆ ಪ್ರಕಟಿಸಿದ ಲೆಕ್ಕವಾಗಿದೆ. ಶಿಬಿರಗಳಲ್ಲಿ ದೈಹಿಕ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ಶಿಬಿರಕ್ಕೆ ಬೆಂಕಿ ಹಾಕಿದ ಘಟನೆಯೂ ನಡೆದಿದೆ. ಅರುವತ್ತು ಘಟನೆಗಳು ನಿರಾಶ್ರಿತರ ಶಿಬಿರದಲ್ಲಿ ಮತ್ತು 42 ಘಟನೆಗಳು ಸಾಮಾಜಿಕ ಸ್ವಯಂ ಸೇವಕರ ಮೇಲೆ ನಡೆದಿದೆ.

ಅಲ್ಲದೆ, 102 ಮಂದಿ ಗಾಯಗೊಂಡಿದ್ದಾರೆ. 2015ರಿಂದ 1.4 ಮಿಲಿಯನ್ ನಿರಾಶ್ರಿತರು ಜರ್ಮನಿಯಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ಸಿರಿಯಾ ಹಾಗೂ ಇರಾಕ್‍ಗಳಿಂದ ಬಂದವರು. ದೇಶದಲ್ಲಿ ತೀವ್ರ ಬಲಪಂಥೀಯರು ನಿರಾಶ್ರಿತರನ್ನು ಸಹಿಸುತ್ತಿಲ್ಲ. ಜರ್ಮನಿಯಲ್ಲಿ ಇದು ದೊಡ್ಡ ಮಟ್ಟದಲ್ಲಿ ಹೆಚ್ಚಳಗೊಂಡಿದೆ. ನಿರಾಶ್ರಿತರನ್ನು ಸ್ವೀಕರಿಸದಂತೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಿರಾಶ್ರಿತರು ಭಯೋತ್ಪಾದಕರು ಎಂದು ಜರ್ಮನಿಯಲ್ಲಿ ಒಂದು ಕೂಟ ವಾದಿಸುತ್ತಿದೆ.