ಕಾಶ್ಮೀರ, ಲಡಾಕ್ ಟೂರಿಸಂ ಕ್ಷೇತ್ರದಲ್ಲಿ ಹೂಡಿಕೆಗೆ ಮುಂದಾದ ಕರ್ನಾಟಕ, ಮಹಾರಾಷ್ಟ್ರ

0
636

ಸನ್ಮಾರ್ಗ ವಾರ್ತೆ

ಬೆಂಗಳೂರು: ಕಾಶ್ಮೀರದ ವಿಶೇಷ ಸ್ಥಾನಮಾನ ತೆರವುಗೊಳಿಸಿದ ಬೆನ್ನಿಗೆ ಜಮ್ಮು-ಕಾಶ್ಮೀರ, ಲಡಾಕ್‍ಗಳಲ್ಲಿ ಟೂರಿಸಂ ಕ್ಷೇತ್ರದಲ್ಲಿ ಹೂಡಿಕೆಗೆ ಕರ್ನಾಟಕ, ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದೇ ಇತರರಿಗೆ ಜಮೀನು ಖರೀದಿಸಲಾಗದು ಎಂಬ ಕಾನೂನು ಇಲ್ಲದಾಗುವುದರೊಂದಿಗೆ ಬಿಜೆಪಿ ಆಡಳಿತದ ಸರಕಾರಗಳು ಹೂಡಿಕೆಗೆ ಮುಂದೆ ಬಂದಿವೆ.

ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮಹರಾಷ್ಟ್ರದ ಟೂರಿಸಂ ಸಚಿವ ಜೈಕುಮಾರ್ ರಾವಲ್ ಭೇಟಿಯಾಗಿದ್ದು, ಜಮ್ಮು-ಕಾಶ್ಮೀರ, ಲಡಾಕ್‍ಗಳಲ್ಲಿ ಎರಡು ಟೂರಿಸ್ಟ್ ರೆಸಾರ್ಟ್‌ಗಳನ್ನು ಮಹಾರಾಷ್ಟ್ರ ಸ್ಥಾಪಿಸಲಿದೆ ಎಂದು ಜೈಕುಮಾರ್ ರಾವಲ್ ಹೇಳಿದರು. ಮಹಾರಾಷ್ಟ್ರ ಅಭಿವೃದ್ಧಿ ಕಾರ್ಪೊರೇಷನ್ ರೆಸಾರ್ಟ್ ನಿರ್ಮಾಣದ ಹೊಣೆ ಹೊರಲಿದೆ. ಮುಖ್ಯಮಂತ್ರಿಯ ಮೂಲಕ ಕಾಶ್ಮೀರದ ಸರಕಾರವನ್ನು ಸಂಪರ್ಕಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಶ್ರೀನಗರ, ಲಡಾಕ್ ರೆಸಾರ್ಟ್‌ಗಳನ್ನು ಕಟ್ಟಲು ಮಹಾರಾಷ್ಟ್ರ ಟೂರಿಸಂ ಕಾರ್ಪೊರೇಷನ್ ಒಂದು ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಕರ್ನಾಟಕ ಟೂರಿಸಂನ ರೆಸಾರ್ಟ್‌ಗಳನ್ನು ಕರ್ನಾಟಕ ಟೂರಿಸಂ ಕಾರ್ಪೊರೇಷನ್ ನಿರ್ಮಿಸಲಿದೆ. ವಿಳಂಬಿಸದೆ ಸಚಿವ ಸಂಪುಟದ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಸಚಿವ ಸಿ.ಟಿ.ರವಿ ಹೇಳಿದರು.