ಮಾಲ್‍ನಲ್ಲಿ ಸಿಕ್ಕಿದ ಮಗು ಯಾರದ್ದು?; ನೆರವು ಯಾಚಿಸಿದ ದುಬೈ ಪೊಲೀಸ್

0
853

ಸನ್ಮಾರ್ಗ ವಾರ್ತೆ

ದುಬೈ,ಸೆ.9: ಮಾಲ್‍ನಲ್ಲಿ ಸಿಕ್ಕಿದ ಮಗುವಿನ ಹೆತ್ತವರ ಬಳಿಗೆ ತಲುಪಿಸಲು ದುಬೈ ಪೊಲೀಸರು ಜನರ ಸಹಾಯವನ್ನು ಯಾಚಿಸಿದ್ದಾರೆ. ಶನಿವಾರ ದೇರಾದ ಅಲ್ ರೀಫ್ ಮಾಲ್‍ನಲ್ಲಿ ಈ ಐದು ವರ್ಷದ ಮಗು ಪತ್ತೆಯಾಗಿದೆ. ತುಂಬ ಹೊತ್ತು ಮಗು ಒಬ್ಬನೆ ಇರುವುದು ಕಂಡು ಬಂದಾಗ ಮಹಿಳೆಯೊಬ್ಬರು ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾರೆ ಎಂದು ಮುರಖಬಾತ್ ಪೊಲೀಸ್ ಠಾಣೆಯ ನಿರ್ದೇಶಕ ಬ್ರಿಗೇಡಿಯರ್ ಅಲಿ ಗಾನಿಮ್ ತಿಳಿಸಿದ್ದಾರೆ. ನಂತರ ಮಗುವನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಉಪಚರಿಸಲಾಗುತ್ತಿದೆ. ಯಾರಿಗಾದರೂ ಈ ಮಗುವಿನ ಗುರುತು ಸಿಕ್ಕರೆ 901 ಹೆಲ್ಫ್ ಲೈನ್ ನಂಬರ್‌ಗೆ ಅಥವಾ 04-2660555 ಫೋನ್ ನಂಬರ್‌ಗೆ ಕರೆ ಮಾಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.