ಆರ್‌ಎಸ್ಎಸ್ ಮಾದರಿಯತ್ತ ಕಾಂಗ್ರೆಸ್!

0
2094

ಹೊಸದಿಲ್ಲಿ,ಸೆ.10: ಸಂಘಟನಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಕಾಂಗ್ರೆಸ್ ಆರೆಸ್ಸೆಸ್ ಮಾದರಿಯನ್ನು ಸ್ವೀಕರಿಸಲು ಹೊರಟಿದೆ. ಪ್ರೇರಕರನ್ನು ನೇಮಗೊಳಿಸಿ ಪಾರ್ಟಿ ಸಂಘಟನೆಯನ್ನು ಕೆಳಹಂತದಲ್ಲಿಯೂ ಬಲಪಡಿಸಲು ಕ್ರಮ ಜರಗಿಸಲಾಗುತ್ತಿದ್ದು, ಇದಕ್ಕಾಗಿ ಸಂಘಟನಾ ವ್ಯವಸ್ಥೆಯನ್ನು ಆರೆಸ್ಸೆಸ್ ಮಾದರಿಯಲ್ಲಿ ಕಟ್ಟಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.

ಸೆ.3ರಂದು ನಡೆದ ಸಭೆಯಲ್ಲಿ ಅಸ್ಸಾಂ ಕಾಂಗ್ರೆಸ್ ನಾಯಕ ತರುಣ್ ಗೊಗೊಯಿ ಈ ಆಶಯವನ್ನು ಮುಂದಿಟ್ಟಿದ್ದರು. ಇತರ ಸದಸ್ಯರೂ ಇದನ್ನು ಅಂಗೀಕರಿಸಿದರು. ಐದು ಜಿಲ್ಲೆಗಳ ಒಂದು ವಿಭಾಗ್ ಗಳನ್ನಾಗಿ ಹಾಗೂ ಅದನ್ನಹ ಮೂರು ಪ್ರೇರಕ್‍ಗಳಾಗಿ ವಿಂಗಡಿಸಲಾಗುವುದು. ನೇಮಿಸಲಾದ ಪ್ರೆರಕ್‍ರು ಫುಲ್ ಟೈಮ್ ವರ್ಕರ್‍ ಆಗಿರುತ್ತಾರೆ. ಈ ತಿಂಗಳು ಪ್ರೇರಕ್‍ಗಳನ್ನು ನೇಮಕಗೊಳಿಸಲು ಪಿಸಿಸಿಗಳಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸೂಚನೆ ನೀಡಿತು. ಪ್ರೇರಕ್‍‌ರು ಪಾರ್ಟಿಯ ಕುರಿತು ಉತ್ತಮ ಅಭಿಪ್ರಾಯವುಳ್ಳ ವ್ಯಕ್ತಿಗಳಾಗಿರುತ್ತಾರೆ.