ಅಸ್ಸಾಂ: ಎನ್‌ಆರ್‌ಸಿಯಲ್ಲಿನ ತಪ್ಪುಗಳನ್ನು ಸರಕಾರ ಸರಿಪಡಿಸಿಕೊಳ್ಳಲಿ- ಆರ್‌ಎಸ್ಎಸ್

0
583

ಸನ್ಮಾರ್ಗ ವಾರ್ತೆ

ಪುಷ್ಕರ್,ಸೆ.10(ರಾಜಸ್ತಾನ): “ಸಾಮಾಜಿಕ, ಆರ್ಥಿಕ ಅಸಮಾನತೆ ಇರುವವರೆಗೆ ದೇಶದಲ್ಲಿ ಮೀಸಲಾತಿ ಅಗತ್ಯವಿದೆ. ಫಲಾನುಭವಿಗಳು ಬಯಸುವವರೆಗೆ ಅದು ಮುಂದುವರಿಯಲಿದೆ” ಎಂದು ಆರೆಸ್ಸೆಸ್ ರಾಜಸ್ತಾನದ ಪುಷ್ಕರದಲ್ಲಿ ಪತ್ರಕರ್ತರಿಗೆ ತಿಳಿಸಿದೆ. 35ರಷ್ಟು ಸಂಘಪರಿವಾರ ಸಂಘಟನೆಗಳ ಕೋಆರ್ಡಿನೇಶನ್ ಸಮಿತಿ ಸಮ್ಮೇಳನಕ್ಕೆ ಸಂಬಂಧಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ತಿಳಿಸಿದೆ.
ದೇಗುಲ, ಸ್ಮಶಾನಗಳು, ಜಲಮೂಲಗಳನ್ನು ಯಾವುದೇ ಪ್ರತ್ಯೇಕ ಜಾತಿಗೆ ಸೀಮಿತಗೊಳಿಸದೆ ಎಲ್ಲರಿಗೂ ತೆರೆದು ಇಡಬೇಕು ಇದು ಸಂಘಟನೆಯ ನಿಲುವು ಎಂದು ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೆಯ ಹೊಸಬಾಳೆ ವಿವರಿಸಿದ್ದಾರೆ.

“ಸಾಮಾಜಿಕ-ಆರ್ಥಿಕ ಅಸಮಾನತೆ ಸಮಾಜದಲ್ಲಿದೆ. ಆದ್ದರಿಂದ ಮೀಸಲಾತಿ ಅಗತ್ಯವಿದೆ. ಸಂವಿಧಾನ ಶಕ್ತಿ ನೀಡುವ ಮೀಸಲಾತಿಯನ್ನು ಸಂಪೂರ್ಣ ಬೆಂಬಲಿಸುತ್ತೇವೆ”  ತ್ರಿದಿನ್ ಬೈಠಕ್ ಬಳಿಕ ಕೊನೆಯ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೊಸಬಾಳೆ ಹೇಳಿದರು. 200 ಪ್ರತಿನಿಧಿಗಳು ಭಾಗವಹಿಸಿದ ಸಮ್ಮೇಳನದಲ್ಲಿ ಮೀಸಲಾತಿ ಚರ್ಚಾ ವಿಷಯವಾಗಿರಲಿಲ್ಲ  ಎಂದು ಅವರು ಹೇಳಿದರು. ಅಸ್ಸಾಮ್‍ನ ಅಂತಿಮ ಪೌರತ್ವ ಪಟ್ಟಿಯಲ್ಲಿ ಕೆಲವು ತಪ್ಪುಗಳಿವೆ. ಇದನ್ನು ಮುಂದುವರಿಸುವ ಮೊದಲು ಸರಕಾರ ತಪ್ಪುಗಳನ್ನು  ತಿದ್ದಿಕೊಳ್ಳಬೇಕೆಂದು ಅವರು ಆಗ್ರಹಿಸಿದರು.