ಬೊರಿಸ್ ಜಾನ್ಸನ್ ಮತ್ತೆ ವಿಫಲ; 5 ವಾರ ಪಾರ್ಲಿಮೆಂಟ್ ಸ್ಥಗಿತ

0
412

ಸನ್ಮಾರ್ಗ ವಾರ್ತೆ

ಲಂಡನ್,ಸೆ.10: ಬ್ರೆಕ್‍ಸಿಟ್‌ನಲ್ಲಿ ಇಂಗ್ಲೆಂಡ್ ಪ್ರಧಾನಿ ಬೊರಿಸ್ ಜಾನ್ಸನ್ ಮತ್ತೆ ಪರಾಜಿತರಾದರು. ದೇಶದಲ್ಲಿ ಅವಧಿಗಿಂತ ಮುಂಚೆ ಚುನಾವಣೆ ನಡೆಸುವ ಜಾನ್ಸನ್‌ರ ಪ್ರಯತ್ನವೂ ವಿಫಲವಾಗಿದೆ. ಪ್ರತಿಪಕ್ಷ, ಆಡಳಿತ ಪಕ್ಷ ಕನ್ಸರ್‍ವೇಟಿವ್ ಸದಸ್ಯರು ಪ್ರಧಾನಿಯ ವಿರುದ್ಧ ವೋಟು ಹಾಕಿ ಸೋಲಿಸಿದರು. ಹೌಸ್ ಆಫ್ ಕಾಮನ್‍ನಲ್ಲಿ 5 ದಿವಸಗಳಲ್ಲಿ ಬೊರಿಸ್ ಅನುಭವಿಸಿದ ಆರನೆಯ ಸೋಲು ಇದಾಗಿದ್ದು; ಘಟನೆಯ ನಂತರ ಸ್ಪೀಕರ್ ರಾಜೀನಾಮೆ ನೀಡಿ ಐದು ವಾರಕ್ಕೆ ಪಾರ್ಲಿಮೆಂಟ್ ಸ್ಥಗಿತಗೊಳಿಸಿದರು.

ಪಾರ್ಲಿಮೆಂಟಿನ ಅಂಗೀಕಾರ ಪಡೆದುಕೊಳ್ಳಲು ಬೊರಿಸ್ ಜಾನ್ಸನ್‍ಗೆ 434 ಮತಗಳ ಅಗತ್ಯವಿದೆ. 650 ಸೀಟುಗಳು ಇರುವ ಪಾರ್ಲಿಮೆಂಟಿನಲ್ಲಿ 293 ಮಂದಿ ಮಾತ್ರ ಜಾನ್ಸನ್‍ರ ಪ್ರಸ್ತಾವವನ್ನು ಬೆಂಬಲಿಸಿದ್ದಾರೆ. ಮತದಾನದಲ್ಲಿ ಬೆಂಬಲಿಸುವುದಿಲ್ಲ ಎಂದು ಪ್ರತಿಪಕ್ಷ ಸಂಸದರು ಮೊದಲೇ ದೃಢಪಡಿಸಿದ್ದರು. ಸರಕಾರ ಕಾನೂನು ಆಳ್ವಿಕೆಯನ್ನು ಪಾಲಿಸಬೇಕೆಂದು ಲೆಬರ್ ನಾಯಕ ಜರೆಮಿ ಕೊರ್‍ಬಿನ್‍ರ ಗೊತ್ತುವಳಿಯನ್ನು ವಿರೋಧವಿಲ್ಲದೆ ಸಂಸದರು ಅಂಗೀಕರಿಸಿದರು.