ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಸೆ.10: ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿತಿಕೆಗೆ ಸಿದ್ಧ ಎಂದು ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ವೈಟ್ ಹೌಸ್‍ನಲ್ಲಿ ಪತ್ರಕರ್ತರೊಂದಿಗೆ ಮಾತಾಡುತ್ತಾ, “ಭಾರತ-ಪಾಕಿಸ್ತಾನಗಳಿಗೆ ಸಹಾಯ ಮಾಡಲು ಅಮೇರಿಕ ತಯಾರು” ಎಂದರು. ಅವರಿಗೆ ಈ ಹಿಂದೆಯೇ ತಿಳಿಸಿದ್ದೇನೆ. ಇನ್ನು ಭಾರತ-ಪಾಕಿಸ್ತಾನ ತೀರ್ಮಾನಿಸಬೇಕಿದೆ.
ಭಾರತ-ಪಾಕಿಸ್ತಾನ ಪರಸ್ಪರ ಕಾಶ್ಮೀರ ವಿಷಯದಲ್ಲಿ ವಿವಾದ ಇದೆ. ಆರ್ಟಿಕಲ್ 370 ರದ್ದು ಪಡಿಸಿದ ನಂತರ ಎರಡು ದೇಶಗಳಲ್ಲಿ ಪರಿಸ್ಥಿತಿ ಕಾವೇರುತ್ತಿದೆ ಎಂದು ಟ್ರಂಪ್ ಹೇಳಿದರು. ಕಳೆದ ತಿಂಗಳು ಜಿ 7 ಶೃಂಗದಲ್ಲಿ ಕಾಶ್ಮೀರ ವಿಷಯ ಭಾರತ-ಪಾಕ್ ರಾಜತಾಂತ್ರಿಕ ವಿಷಯ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಮೋದಿ ಟ್ರಂಪ್‍ಗೆ ಹೇಳಿದರು. ಇದರ ಬೆನ್ನಿಗೆ ಪುನಃ ಮಧ್ಯಸ್ಥಿಕೆಗೆ ಅವರು ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ.












