ಮಂಗಳೂರು: ಇಸ್ಲಾಮಿ ಪುಸ್ತಕಾಲಯದ ನೂತನ ಮಳಿಗೆ ಉದ್ಘಾಟನೆ

0
889

ಸನ್ಮಾರ್ಗ ವಾರ್ತೆ-

ಮಂಗಳೂರು; ಸೆ. ಇಲ್ಲಿನ ಬಂದರ್ ಬೀಬಿ ಅಲಾಬಿ ರಸ್ತೆಯಲ್ಲಿರುವ ಇಸ್ಲಾಮೀ ಪುಸ್ತಕಾಲಯದ ನೂತನ ಪುಸ್ತಕ ಮಳಿಗೆಯು ರಾವ್ ಎಂಡ್ ರಾವ್ ಸರ್ಕಲ್ ಬಳಿಯಲ್ಲಿರುವ ನೂತನ ವಾಣಿಜ್ಯ ಸಂಕೀರ್ಣವಾದ “ಸಹಕಾರಿ ಸದನ”ದಲ್ಲಿ ಇತ್ತೀಚಿಗೆ ಪ್ರಾರಂಭವಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಘಟಕಾಧ್ಯಕ್ಷರಾದ ಡಾ। ಮುಹಮ್ಮದ್ ಸಾದ್ ಬೆಳಗಾಮಿಯವರು ಮಳಿಗೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತಾಡುತ್ತಾ, ಇದು ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗುವ ಮಳಿಗೆಯಾಗಿದೆ. ಸ್ರಷ್ಟಿಕರ್ತನ ಸಂದೇಶವನ್ನು ಆತನ ದಾಸರಿಗೆ ತಲಪಿಸುವ ಪ್ರಯತ್ನವಾಗಿದೆ. ಇದರ ಮೂಲಕ ಜನರಲ್ಲಿರುವ ತಪ್ಪು ಗ್ರಹಿಕೆಗಳು ದೂರವಾಗಲಿ ಮತ್ತು ಸಮಾಜದಲ್ಲಿ ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.

ಜ. ಇ. ಮಂಗಳೂರು ನಗರ ಅಧ್ಯಕ್ಷರಾದ ಕೆ. ಎಮ್. ಅಶ್ರಫ್ ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಕೆ. ಎಮ್. ಶರೀಫ್ ಪ್ರಾರ್ಥಿಸಿದರು. ಮಳಿಗೆಯ ವ್ಯವಸ್ಥಾಪಕರಾದ ಮುಖ್ತಾರ್ ಅಹ್ಮದ್ ಧನ್ಯವಾದ ಸಮರ್ಪಿಸಿದರು.