ಚೀನಾ: ವಿಜ್ಞಾನ ಜಗತ್ತಿನಲ್ಲಿ ಮತ್ತೆ ಸಂಚಲನ ಸೃಷ್ಟಿಸಿದ ಅಜ್ಞಾತ ತರಂಗಗಳು!

0
1220

ಸನ್ಮಾರ್ಗ ವಾರ್ತೆ

ಬೀಜಿಂಗ್,ಸೆ.11: ಪ್ರಪಂಚದಲ್ಲಿ ಭೂಮಿಯಲ್ಲಲ್ಲದೆ ಬೇರೆ ಗ್ರಹಗಳಲ್ಲಿ ಜೀವರಾಶಿ ಇದೆಯೇ ಎಂಬ ಸಂಶಯ ಮತ್ತು ಭಿನ್ನಾಭಿಪ್ರಾಯಗಳಿಗೆ ಚೀನಾದ ಬೃಹತ್ ಟೆಲೆಸ್ಕೋಪ್ ಎಡೆಯಾಗಿದೆ. ಬಾಹ್ಯಾಕಾಶ ಅಧ್ಯಯನಕ್ಕಾಗಿ ಚೀನಾದ ಗುಯ್ಶು ಪ್ರಾಂತದ ಜಿಂಖ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಟೆಲೆಸ್ಕೋಪ್ ಕಳೆದ ಆಗಸ್ಟ್‌ನಲ್ಲಿ ನೂರರಷ್ಟು ಅಜ್ಞಾತ ರೇಡಿಯೊ ತರಂಗಗಳು ಬಂದಪ್ಪಳಿಸಿವೆ.
ಫಾಸ್ಟ್ ಎಂಬ ಸಂಕ್ಷಿಪ್ತ ಹೆಸರಿನಲ್ಲಿರುವ ಫೈವ್‌ಹಂಡ್ರಡ್ ಮೀಟರ್ ಅಪೆಚರ್ ಸ್ಫೈರಿಕಲ್ ರೇಡಿಯೊ ಟೆಲಿಸ್ಕೋಪ್ ಭೂಮಿಯಿಂದ 300 ಕೋಟಿ ಪ್ರಕಾಶ ವರ್ಷ ದೂರದ ಸಂಶಯಾಸ್ಪದ ರೇಡಿಯೊ ತರಂಗಗಳನ್ನು ಸೆರೆಹಿಡಿದಿದೆ. ಉನ್ನತ ಪ್ರಮಾಣದ ಇಂಧನ ಮೂಲಗಳಿಂದ ತರಂಗಗಳು ಹೊರಟಿದೆಯೆಂದು ಚೈನಿಸ್ ವಿಜ್ಞಾನಿಗಳು ತಿಳಿಸಿದರು.

2007ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್‍ವೇಲ್ಸ್‌ನ ಟೆಲೆಸ್ಕೋಪ್‍ನಲ್ಲಿ ಇಂತಹ ರೇಡಿಯೊ ತರಂಗಗಳು ಅಪ್ಪಳಿಸಿದ್ದವು. ಅದರ ನಂತರ ಈಗ ಪುನಃ ಭೂಮಿಗೆ ಬಂದಿದೆ. ಈಗ ಲಭಿಸಿದ ತರಂಗಗಳು ಒಂದು ನಿರ್ಮಿತ ಉಪಕರಣದಿಂದಾರುವ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕಿಲ್ಲ. ಅನ್ಯಗ್ರಹ ಜೀವಿಗಳ ಸೃಷ್ಟಿಯಾಗಿರುವ ಸಾಧ್ಯತೆಯಿದೆ ಎಂದು ಕೆಲವು ವಿಜ್ಞಾನಿಗಳು ತಿಳಿದಿದ್ದಾರೆ. ಈ ಅಂದಾಜು ಸರಿಯಾಗಿದ್ದರೆ ಪ್ರಪಂಚದಲ್ಲಿ ಮುನಷ್ಯ ಸಮಾನ ಜೀವಿಗಳು ಉಪಸ್ಥಿತಿ ಇರುವ ಕುರಿತಾದ ಅಧ್ಯಯನವು ಚರಿತ್ರೆಯಲ್ಲಿ ಒಂದು ಮೈಲುಗಲ್ಲಾಗಿಸಲು ಈ ತರಂಗಗಳು ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೂಪರ್ ನೋವಾ ಸ್ಫೋಟ, ಕ್ಷೀರಪಥದ ನ್ಯೂಟ್ರಾನ್, ಹೈಡ್ರೋಜನ್ ಕುರಿತ ಅಧ್ಯಯನ ನಡೆಸುವುದಕ್ಕಾಗಿ ಚೀನಾ 180 ದಶಲಕ್ಷ ಡಾಲರ್ ವೆಚ್ಚದಲ್ಲಿ ಬೃಹತ್ ಟೆಲೆಸ್ಕೋಪ್ ಸ್ಥಾಪಿಸಿತ್ತು. ಇದಕ್ಕಾಗಿ 9000 ಮಂದಿಯಿರುವ ಕುಟುಂಬಗಳನ್ನು ಗ್ರಾಮದಿಂದ ತೆರವುಗೊಳಿಸಲಾಗಿದೆ. 2016ರಲ್ಲಿ ನಿರ್ಮಾಣ ಕಾರ್ಯ ಕೊನೆಗೊಂಡಿತು. 2016 ಸೆಪ್ಟಂಬರ್‌ನಲ್ಲಿ ಇದು ಕಾರ್ಯನಿರ್ವಹಿಸತೊಡಗಿದೆ. ಇದುವರೆಗೆ 1300 ಪ್ರಕಾಶ ವರ್ಷ ದೂರದ ಕಾಂತಿ ತರಂಗಗಳನ್ನು ಹಿಡಿದಿಡಲು ಈ ವ್ಯವಸ್ಥೆಯಿಂದಾಗಿದೆ. ಇತ್ತೀಚೆಗೆ ಕಂಡು ಬಂದ ಅಜ್ಞಾತ ರೇಡಿಯೊ ತರಂಗಗಳ ಮೂಲಕ್ಕೆ “ಎಫ್‌ಆರ್‌ಬಿ1211102” ಎಂದು ಹೆಸರಿಸಲಾಗಿದೆ. ಇಲ್ಲಿರುವ ತರಂಗಗಳನ್ನು ಹೆಚ್ಚಿನ ಪರಶೀಲನೆಗೆ ಒಳಪಡಿಸುತ್ತೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.