ಸನ್ಮಾರ್ಗ ವಾರ್ತೆ-
ದೆಹಲಿ; ಸೆ.11- 370 ನೇ ವಿಧಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಸರ್ಕಾರ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಪ್ರಶ್ನಿಸಿದ್ದಕ್ಕಾಗಿ ಬಿಜೆಪಿಯ ಮುಖಂಡ ಮತ್ತು ಸಂಸತ್ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸೋಮವಾರ ಕಾಶ್ಮೀರಿ ಮುಸ್ಲಿಮರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಲಕ್ಷಾಂತರ ಕಾಶ್ಮೀರಿ ಪಂಡಿತರು, ಸಿಖ್ಖರು ಮತ್ತು ಬೌದ್ಧರು ಕೊಲ್ಲಲ್ಪಡುವಾಗ, ಅತ್ಯಾಚಾರಕ್ಕೊಳಗಾದಾಗ ಮತ್ತು ರಾಜ್ಯವನ್ನು ತೊರೆಯುವಂತಾದಾಗ ಅವರು ಗೊಣಗಿದ್ದರೆ? ಎಂದು ಪ್ರಶ್ನಿಸಿದ್ದಾರೆ.
“ಕೆಲವು ಕಾಶ್ಮೀರಿ ಮುಸ್ಲಿಮರು ಭದ್ರತಾ ಕ್ರಮಗಳ ಬಗ್ಗೆ ಏಕೆ ಗೊಣಗುತ್ತಿದ್ದಾರೆ? 5 ಲಕ್ಷ ಕಾಶ್ಮೀರಿ ಹಿಂದೂಸ್ತಾನಿಗಳನ್ನು (ಪಂಡಿತರು, ಸಿಖ್ಖರು ಮತ್ತು ಬೌದ್ಧರು) ಅವಮಾನಿಸಿದಾಗ, ಅತ್ಯಾಚಾರ ಮಾಡಿ ಹೊರಗೆ ಓಡಿಸಿದಾಗ ಅವರು ಗೊಣಗಿದ್ದರೆ? ಈಗ ಪ್ರಾಯಶ್ಚಿತ ಕೈಗೊಳ್ಳಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
Why are some Kashmiri Muslims grumbling about security measures? Did they grumble when Kashmiri Hindustanis(Pandits, Sikhs &Buddhists) of 5 lakhs were humiliated, raped and driven out ? Do prayaschit now
— Subramanian Swamy (@Swamy39) September 9, 2019
ಜಮ್ಮು ಮತ್ತು ಕಾಶ್ಮೀರ ರಾಜಕೀಯ ಪಕ್ಷಗಳು ಸೇರಿದಂತೆ ಹಲವಾರು ರಾಜಕಾರಣಿಗಳು ನರೇಂದ್ರ ಮೋದಿ ಸರ್ಕಾರವು ತನ್ನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಿನಿಂದಲೂ ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ಟೀಕಿಸಿದ್ದಾರೆ. ಪ್ರಾಣಹಾನಿ ತಡೆಗಟ್ಟಲು ಮತ್ತು ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಗಳನ್ನು ಪರಿಶೀಲಿಸಲು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ನಿರ್ಬಂಧಗಳನ್ನು ಹಂತಹಂತವಾಗಿ ತೆಗೆದುಹಾಕುವುದಾಗಿ ಸರ್ಕಾರ ಹೇಳಿದೆ.












