ಬೆಂಗರೆ ಗ್ರಾಮದ ಸರ್ವತೋಮುಖ ಅಭಿವೃದ್ದಿ‌ಯನ್ನು ಆಗ್ರಹಿಸಿ ದ ಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ “ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿ”

0
699

ಸನ್ಮಾರ್ಗ ವಾರ್ತೆ-

ಮಂಗಳೂರು; ಸೆ. ಬೆಂಗರೆ ಗ್ರಾಮದ ಸರ್ವತೋಮುಖ ಅಭಿವೃದ್ದಿ‌ಯನ್ನು ಆಗ್ರಹಿಸಿ ಬೆಂಗರೆ ಗ್ರಾಮಾಭಿವೃದ್ಧಿ ಸಮಿತಿಯು ದ ಕ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ರಿಗೆ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿ, ಮಾತಾಡಿದ ನೂತನ ಡಿ.ಸಿ.ಯವರು,

“ಹೆಚ್ಚಿನ ಮನವಿಗಳು ಮಹಾನಗರ ಪಾಲಿಕೆಗೆ ಸಂಬಂಧಿಸಿಯೇ ಬಂದಿದ್ದು, ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುವೆನು” ಎಂದು ಭರವಸೆ ಕೊಟ್ಟರು.

ಜೊತೆಗೆ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜಾರನ್ನು ಈ ಸಮಿತಿಯುಭೇಟಿಯಾಗಿ, ಬೆಂಗರೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಮನವಿ ನೀಡಿತು. ಸಮಿತಿಯ ಬೇಡಿಕೆಯನ್ನು ಆಲಿಸಿದ ಅವರು, ಕೂಡಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಿಸಿದರು. ಪತ್ರದಲ್ಲಿ, ಜಿಲ್ಲಾಡಳಿತವು ಗ್ರಾಮಾಭಿವೃದ್ಧಿ ಸಮಿತಿಯೊಂದಿಗೆ ಸಭೆ ನಡೆಸಿ, ಸದ್ರಿ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಮಾಡಿಕೊಡಬೇಕೆಂದು ತಾಕೀತು ಮಾಡಿದರು. ಬಳಿಕ ತನ್ನಿಂದಾಗುವ ಪ್ರಯತ್ನವನ್ನು ನಾನು ಮಾಡುವೆ ಎಂದು ಸಮಿತಿಗೆ ಭರವಸೆ ಕೊಟ್ಟರು.

ನಿಯೋಗದಲ್ಲಿ ಗೌರವಾಧ್ಯಕ್ಷ ನಝೀರ್ ಹುಸೇನ್, ಅಧ್ಯಕ್ಷ ಸಲಾವುದ್ದೀನ್, ಪ್ರಧಾನ ಕಾರ್ಯದರ್ಶಿ ಫೈಝಲ್ ಬಿನ್ ಇಸ್ಮಾಈಲ್, ಪದಾಧಿಕಾರಿಗಳಾದ ಅಬ್ದುಲ್ ಹಮೀದ್, ಆಸಿಫ್ ಬೆಂಗರೆ, ಇಸ್ಮಾಈಲ್ ಯು.ಎ, ರಿಯಾಝ್ ಬೆಂಗರೆ ಹಾಗೂ ಇಸ್ಮಾಈಲ್ ಸಾಬ್ ಉಪಸ್ಥಿತರಿದ್ದರು.