ಸನ್ಮಾರ್ಗ ವಾರ್ತೆ
ರಿಯಾದ್,ಸೆ.11: ಭಾರತದ ವ್ಯಕ್ತಿಯೊಬ್ಬರ ಮೇಲೆ ಕಾರು ಹರಿಸಿ ಕೊಂದ ಪ್ರಕರಣದಲ್ಲಿ ಇಬ್ಬರು ಸೌದಿ ಅರೇಬಿಯಾದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾದ್‍ನಲ್ಲಿ ಕಳೆದ ರವಿವಾರ ಈ ಘಟನೆ ನಡೆದಿತ್ತು. ಮಾತಿನ ಚಕಮಕಿ ನಡೆದು ಆರೋಪಿಗಳು ಭಾರತದ ವ್ಯಕ್ತಿಯ ಮೇಲೆ ಕಾರು ಹರಿಸಿ ಕೊಂದು ನಂತರ ಕಾರಿನೊಂದಿಗೆ ಪರಾರಿಯಾಗಿರುವ ದೃಶ್ಯಗಳು ಹೊರಗೆ ಬಂದಿತ್ತು.
ರವಿವಾರ ಬೆಳಗ್ಗೆ ಒಂಬತ್ತು ಗಂಟೆಗೆ ಘಟನೆಯ ಕುರಿತು ಪೊಲೀಸರಿಗೆ ವಿವರ ದೊರಕಿತ್ತು. ಕಾರಿನಲ್ಲಿ ಬಂದ ಇಬ್ಬರು ಭಾರತೀಯ ವ್ಯಕ್ತಿಯನ್ನು ವಾಹನದ ಹಿಂದೆ ನಿಲ್ಲಿಸಿದರು. ನಂತರ ಮಾತಿನ ಚಕಮಕಿ ಮತ್ತು ನೂಕಾಟ ನಡೆದಿದೆ. ಗಲಾಟೆ ಕೇಳಿ ಜನರು ಓಡಿ ಬಂದಾಗ ಆರೋಪಿಗಳು ಕಾರನ್ನು ವೇಗವಾಗಿ ಹಿಂದಕ್ಕೆ ತೆಗೆದುಕೊಂಡಿದ್ದು ಭಾರತೀಯ ವ್ಯಕ್ತಿಯು ಕಾರಿನಡಿಗೆ ಸಿಲುಕಿ ಕೊಲ್ಲಲ್ಪಟ್ಟರು. ಕೊಲೆಯಾದ ವ್ಯಕ್ತಿಯ ವಿವರಗಳು ಹಾೂ ಘಟನಾ ಸ್ಥಳವನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಮಾತಿನ ಚಕಮಕಿ ನಡೆಯಲು ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ.












