ರಸ್ತೆಗಳು ಚೆನ್ನಾಗಿದ್ದರೆ ಅಪಘಾತ ಹೆಚ್ಚಾಗುತ್ತದೆ ಎಂದ ಉಪಮುಖ್ಯಮಂತ್ರಿ ಕಾರಜೋಳ

0
760

ಚಿತ್ರದುರ್ಗ, ಸೆ. 12: ವಾಹನಗಳಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಕುತ್ತಿರುವುದಕ್ಕೆ ಮತ್ತು ರಸ್ತೆಗಳು ಕೆಟ್ಟು ಹೋಗಿರುವುದಕ್ಕೆ ದೇಶಾದ್ಯ೦ತ ವಿರೋಧಗಳು ವ್ಯಕ್ತವಾಗುತ್ತಿರುವ ನಡುವೆಯೇ, ರಸ್ತೆಗಳು ಚೆನ್ನಾಗಿದ್ದರೆ ಅಪಘಾತ ಹೆಚ್ಚಾಗುತ್ತದೆ ಎಂದು ಹೇಳಿ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚರ್ಚೆಗೆ ಕಾರಣರಾಗಿದ್ದಾರೆ.

ಚಿತ್ರದುರ್ಗದಲ್ಲಿ ಮಾತಾಡಿದ ಅವರು, ಕೆಟ್ಟ ರಸ್ತೆಗಳ ಕಾರಣದಿಂದಾಗಿ ಅಪಘಾತಗಳು ಸಂಭವಿಸುವುದಿಲ್ಲ, ರಸ್ತೆಗಳು ಉತ್ತಮ ಮತ್ತು ಸುರಕ್ಷಿತವಾದ ಕಾರಣ ಅವು ಸಂಭವಿಸುತ್ತವೆ.

ನಮ್ಮ ರಸ್ತೆಗಳಲ್ಲಿ ಜನರು ಗಂಟೆಗೆ 100 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಓಡಬಹುದು ಮತ್ತು ಅದಕ್ಕಾಗಿಯೇ ಹೆಚ್ಚಿನ ಸಂಖ್ಯೆಯ ಅಪಘಾತಗಳು ಸಂಭವಿಸುತ್ತಿವೆ” ಎಂದು ಅವರು ಹೇಳಿದರು. ಭಾರಿ ದಂಡವನ್ನು ಬೆಂಬಲಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ದಂಡದ ಮೊತ್ತ ಪರಿಷ್ಕರಣೆ ಮಾಡಲಾಗಿದೆ. ರಾಜ್ಯದಲ್ಲಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.