ಬಸ್‍ನಿಂದ ಕೆಳಗಿಳಿಸಲ್ಪಟ್ಟ ರೋಗಿ ಸಾವು; ಪ್ರತಿಭಟನೆ

0
482

ಸನ್ಮಾರ್ಗ ವಾರ್ತೆ

ಕೇರಳ,ಸೆ.12: ಖಾಸಗಿ ಬಸ್‍ನಿಂದ ಕೆಳಗಿಳಿಸಲಾದ ರೋಗಿಯೊಬ್ಬರು ಮೃತಪಟ್ಟ ಘಟನೆ ವಣ್ಣಪುರಂ, ಮೂವಾಟ್ಟುಪುಝ ರೂಟ್‍ನಲ್ಲಿ ನಡೆದಿದೆ. ಬಸ್‍ನಿಂದ ಇಳಿಸಲಾದ ಸೇವ್ಯರ್(68)ರು ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಮೃತಪಟ್ಟರು. ಬಸ್‍ನಲ್ಲಿ ಸೇವ್ಯರ್ ಕುಸಿದು ಬಿದ್ದರು. ಇವರಿಗೆ ಚಿಕಿತ್ಸೆ ನೀಡಲು ಬಸ್ ಸಿಬ್ಬಂದಿ ಮುಂದೆ ಬರಲಿಲ್ಲ. ಬದಲಾಗಿ ಬಸ್‍ನಿಂದ ಇಳಿಸಿಬಿಟ್ಟರು.

ಊರವರು ಘಟನೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್‍ನಲ್ಲಿ ಪ್ರಯಾಣಿಸುವ ದಾರಿಯಲ್ಲಿ ಆಸ್ಪತ್ರೆ ಇದ್ದೂ ರೋಗಿಯನ್ನು ಅಲ್ಲಿಗೆ ತಲುಪಿಸಲಿಲ್ಲ ಎಂದು ಕುಟುಂಬದವರು ಹೇಳಿದ್ದು, ಇದು ರೋಗಿಯ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಿದರು. ಮೃತನ ಸಂಬಂಧಿಕರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಅವರ ಜತೆ ಊರವರು ಸೇರಿದರು. ಘಟನೆ ವಿವಾದವಾದ್ದರಿಂದ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರಾದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ.